ಪಂಚಮುಖಿ ಆಂಜನೇಯ ಫೋಟೊ ಮನೆಯಲ್ಲಿ ಎಲ್ಲಿ ಇಟ್ಟರೆ ಒಳ್ಳೆಯದು
By Raghavendra M Y
Oct 22, 2024
Hindustan Times
Kannada
ಭಗವಾನ್ ಶ್ರೀರಾಮನ ಭಕ್ತನಾದ ಹನುಮಂತನನ್ನು ಮನಃಪೂರ್ವಕವಾಗಿ ಪೂಜಿಸಿದರೆ ಭಕ್ತರ ಕಷ್ಟಗಳಿಗೆ ಪರಿಹಾರ ನೀಡುತ್ತಾನೆ ಎಂಬ ನಂಬಕೆ ಇದೆ
ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಹನುಮಂತನ ಚಿತ್ರವನ್ನು ಇಡುವುದರಿಂದ ವಾಸ್ತು ದೋಷಗಳಿಂದ ಉಂಟಾಗುವ ನಕಾರಾತ್ಮಕತೆ ದೂರವಾಗುತ್ತದೆ
ಮನೆಯಲ್ಲಿ ಆಂಜನೇಯನ ಪೋಟೊ ಇಡುವ ಸರಿಯಾದ ವಿಧಾನವನ್ನು ತಿಳಿಯೋಣ
ಧಾರ್ಮಿಕ ನಂಬಿಕೆಗಳ ಪ್ರಕಾರ, ಪಂಚಮುಖಿ ಹನುಮಂತನ ಪೋಟೊಗೆ ವಿಶೇಷ ಮಹತ್ವವಿದೆ. ಇದನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತೆ
ಪಂಚಮುಖಿ ಹನುಮಂತನ ಫೋಟೊವನ್ನು ಮನೆಯಲ್ಲಿ ಇಡುವುದರಿಂದ ವಾಸ್ತು ದೋಷಗಳಿಂದ ಉಂಟಾಗುವ ತೊಂದರೆಗಳು ದೂರವಾಗುತ್ತವೆ
ಮನೆಯ ದಕ್ಷಿಣ ದಿಕ್ಕಿನಲ್ಲಿ ಹನುಮಂತನ ಫೋಟೊ ಇಡುವುದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವವು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ
ಮನೆಯ ಪ್ರವೇಶ ದ್ವಾರದಲ್ಲಿ ಹನುಮಂತನ ಪ್ರತಿಮೆ ಅಥವಾ ಫೋಟೊವನ್ನು ಇರಿಸುವುದರಿಂದ ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದನ್ನ ತಡೆಯುತ್ತೆ
ವಾಸ್ತು ಪ್ರಕಾರ, ಆಂಜನೇಯ ಕೆಂಪು ಬಣ್ಣದಲ್ಲಿರುವ ಫೋಟೊ ಇಟ್ಟರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ
ಮಲಗುವ ಕೋಣೆ, ಮೆಟ್ಟಿಲುಗಳ ಕೆಳಗೆ ಹಾಗೂ ಅಡುಗೆ ಮನೆಯಲ್ಲಿ ದೇವರ ಫೋಟೊ ಎಂದಿಗೂ ಇಡಬೇಡಿ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ