ಶಿವನ ಫೋಟೋ ಇಡಲು ಸೂಕ್ತ ಸ್ಥಳ ಯಾವುದು?

By Rakshitha Sowmya
Apr 01, 2024

Hindustan Times
Kannada

ನಮ್ಮ ಜೀವನದ ಮೇಲೆ ವಾಸ್ತು ಬಹಳ ಪ್ರಭಾವ ಬೀರುತ್ತದೆ. ಹಾಗೇ ದೇವರ ಕೋಣೆ, ಫೋಟೋಗಳಿಗೂ ವಾಸ್ತು ಅನ್ವಯಿಸುತ್ತದೆ. 

ಹಿಂದೂ ಧರ್ಮದಲ್ಲಿ ಮನೆಯಲ್ಲಿ ಇಷ್ಟದೇವತೆಯನ್ನು ಇಟ್ಟು ಪೂಜಿಸುವುದು ಉತ್ತಮ ಫಲ ನೀಡುತ್ತದೆ ಎಂಬ ನಂಬಿಕೆ ಇದೆ

ನೀವು ಶಿವನನ್ನು ಆರಾಧಿಸುತ್ತಿದ್ದರೆ, ಮನೆಯಲ್ಲಿ ಯಾವ ದಿಕ್ಕಿಗೆ ಶಿವನ ಫೋಟೋ ಇಡಬೇಕು ಎನ್ನುವುದರ ಬಗ್ಗೆ ಇಲ್ಲಿ ಮಾಹಿತಿ ಇದೆ. 

ಈ ರೀತಿ ನೀವು ದೇವರ ಫೋಟೋ ಇಡಲು ವಾಸ್ತುವನ್ನು ಅನುಸರಿಸಿದರೆ ಶಿವನ ಅನುಗ್ರಹ ನಿಮಗೆ ಸದಾ ಇರಲಿದೆ

ವಾಸ್ತು ಪ್ರಕಾರ ಶಿವನಿಗೆ ಉತ್ತರವು ಇಷ್ಟವಾದ ದಿಕ್ಕು

ಉತ್ತರ ದಿಕ್ಕಿನಲ್ಲಿ ಶಿವನು ವಾಸಿಸುವ ಕೈಲಾಸ ಪರ್ವತವಿದ್ದು ಅದೇ ಸ್ಥಳದಲ್ಲಿ ಶಿವ ಪಾರ್ವತಿಯರ ಫೋಟೋ ಇರಿಸಿದರೆ ಸೂಕ್ತ

ಉತ್ತರ ದಿಕ್ಕಿನಲ್ಲಿ ಶಿವನ ಫೋಟೋ ಇರಿಸುವುದರಿಂದ ಮನೆಗೆ , ಮನೆವರಿಗೆ ಒಳ್ಳೆಯದು. ಇದು ಪಾಸಿಟಿವ್‌ ವೈಬ್ಸ್‌ ಸೃಷ್ಟಿಸುತ್ತದೆ. 

ಗಣೇಶ, ಸುಬ್ರಹ್ಮಣ್ಯ ಸಹಿತ ಶಿವನ ಕುಟುಂಬದ ಫೋಟೋ ಕೂಡಾ ಮನೆಯಲ್ಲಿದ್ದರೆ ಒಳಿತು. ಆದರೆ ಈ ಫೋಟೋಗಳನ್ನು ಮಲಗುವ ಕೋಣೆಯಲ್ಲಿಡಬಾರದು

ಶಿವನು ಶಾಂತ, ಧ್ಯಾನಸ್ತ ಹಾಗೂ ನಂದಿಯ ಮೇಲೆ ಕುಳಿತಿರುವ ಫೋಟೋ ಆದರೆ ಉತ್ತಮ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಆರ್ಥಿಕ ಬಿಕ್ಕಟ್ಟಿನಿಂದ ಪಾಕಿಸ್ತಾನದ ಜನ ಕಂಗಾಲು, ದಿನಬಳಕೆ ವಸ್ತುಗಳ ದರ ಗಗನಕ್ಕೇರಿದೆ