ಮನೆ, ಕಚೇರಿಯಲ್ಲಿ ಲಾಫಿಂಗ್‌ ಬುದ್ಧ ಇಡುವುದೇಕೆ?

By Rakshitha Sowmya
May 06, 2024

Hindustan Times
Kannada

ವಾಸ್ತುಶಾಸ್ತ್ರದಂತೆ ಫೆಂಗ್‌ ಶುಯಿಯಲ್ಲಿ ಪಾಸಿಟಿವ್‌ ವೈಬ್ಸ್‌ ತರುವ ಅನೇಕ ವಸ್ತುಗಳುಂಟು, ಇವುಗಳನ್ನು ಮನೆ ಅಥವಾ ಅಂಗಡಿಯಲ್ಲಿ ಇಟ್ಟುಕೊಂಡರೆ ಬಹಳ ಶುಭ

ಲಾಫಿಂಗ್‌ ಬುದ್ಧ ಸಮೃದ್ಧಿ ಸಂತೋಷ ತರುತ್ತಾನೆ ಎಂದು ನಂಬಲಾಗಿದೆ. ಇದನ್ನು ಪ್ರೀತಿಪಾತ್ರರಿಗೆ ಗಿಫ್ಟ್‌ ಆಗಿ ಕೂಡಾ ನೀಡಬಹುದು

ಚೀನಾದಲ್ಲಿ ಲಾಫಿಂಗ್‌ ಬುದ್ಧನನ್ನು ದೇವರಂತೆ ಪೂಜಿಸಲಾಗುತ್ತದೆ. ಬುದ್ಧನ ವಿಗ್ರಹವನ್ನು ಮನೆಯ ಮುಂದೆ ಇರಿಸುವುದರಿಂದ ನಕಾರಾತ್ಮಕತೆ ದೂರಾಗುತ್ತದೆ ಎಂದು ನಂಬಲಾಗಿದೆ

ಭಾರತದಲ್ಲಿ ಕುಬೇರನನ್ನು ಪೂಜಿಸುವಂತೆ ಚೀನಾದಲ್ಲಿ ಲಾಫಿಂಗ್‌ ಬುದ್ಧನನ್ನು ಪೂಜಿಸಲಾಗುತ್ತದೆ

ಚೀನೀ ನಂಬಿಕೆ ಪ್ರಕಾರ ಹೋಟೆಯು ಬುದ್ಧನ ಶಿಷ್ಯರಲ್ಲಿ ಒಬ್ಬರು. ಹೋಟೆಯು ಬೌದ್ಧನಾಗಿ, ಜ್ಞಾನೋದಯವಾದ ನಂತರ ಜೋರಾಗಿ ನಗಲು ಆರಂಭಿಸುತ್ತಾನೆ

ಅಂದಿನಿಂದ ಜನರನ್ನು ನಗಿಸುವುದು, ಅವರಿಗೆ ಸಂಪತ್ತು ಸುಖ, ಸಂತೋಷ ನೀಡುವುದು ಹೋಟೆ ಜೀವನದ ಗುರಿಯಾಗಿದೆ

ಲಾಫಿಂಗ್‌ ಬುದ್ಧ ನೆಲೆಸಿರುವ ಕಡೆ ಅಲ್ಲಿ ಹಣದ ಹೊಳೆಯೇ ಹರಿದುಬರಲಿದೆ ಎಂದು ನಂಬಲಾಗಿದೆ

ಈ ಕಾರಣದಿಂದಾಗಿ ಮನೆ, ಕಚೇರಿ, ಹೋಟೆಲ್‌ ಸೇರಿದಂತೆ ಅನೇಕ ಕಡೆ ಲಾಫಿಂಗ್‌ ಬುದ್ಧನನ್ನು ಇಡಲಾಗುತ್ತದೆ

ಲಾಫಿಂಗ್‌ ಬುದ್ಧನನ್ನು ಮನೆಯ ಮುಖ್ಯ ದ್ವಾರದ ಬಳಿ ಇಡಬಾರದು, ಮನೆಯ ಹಾಲ್‌ನಲ್ಲಿ ನೆಲದಿಂದ ಎತ್ತರ ಇಡುವಂತೆ ವಾಸ್ತುವಿನಲ್ಲಿ ಸೂಚಿಸಲಾಗಿದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕೆಲವೇ ದಿನಗಳಲ್ಲಿ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಈ ಮನೆಮದ್ದು ಟ್ರೈ ಮಾಡಿ