ವಾಸ್ತು ನಿಯಮವನ್ನು ಸರಿಯಾಗಿ ಪಾಲಿಸುವುದರಿಂದ ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
ಆದರೆ ತಿಳಿದೋ, ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡಿದರೆ ಖಂಡಿತ ಒಂದಲ್ಲಾ ಒಂದು ಸಮಸ್ಯೆ ಆಗುತ್ತದೆ
ಬಟ್ಟೆ ಇಡುವ ವಿಚಾರದಲ್ಲೂ ವಾಸ್ತು ಬಹಳ ಮುಖ್ಯ, ಕೆಲವರು ಬಟ್ಟೆಯನ್ನ ಬಾಗಿಲಿನ ಹಿಂದೆ ಕೊಕ್ಕೆಗೆ ನೇತುಹಾಕುತ್ತಾರೆ, ಆದರೆ ಇದು ವಾಸ್ತುಪ್ರಕಾರ ತಪ್ಪು
ಬಾಗಿಲಿನ ಹಿಂದೆ ಈ ರೀತಿ ಬಟ್ಟೆ ನೇತುಹಾಕುವುದನ್ನು ವಾಸ್ತುಶಾಸ್ತ್ರದಲ್ಲಿ ನಿಷೇಧಿಸಲಾಗಿದೆ
ಸಂಪತ್ತಿನ ಅಧಿದೇವತೆ ಲಕ್ಷ್ಮೀ ಬಾಗಿಲಿನಲ್ಲಿ ನೆಲೆಸಿರುತ್ತಾಳೆ, ಬಾಗಿಲಿನ ಮೇಲೆ ಅಥವಾ ಹಿಂಭಾಗ ಬಟ್ಟೆಗಳನ್ನು ಹಾಕುವುದು ಲಕ್ಷ್ಮೀಗೆ ಅವಮಾನ ಮಾಡಿದಂತೆ
ಬಾಗಿಲಿನ ಹಿಂದೆ ಬಟ್ಟೆ ಹಾಕುವುದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ, ನಿಮಗೆ ಹಣಕಾಸಿನ ಸಮಸ್ಯೆ ಉಂಟಾಗಬಹುದು
ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಉದ್ಭವಿಸಬಹುದು, ಕುಟುಂಬದ ಸದಸ್ಯರ ನಡುವೆ ಜಗಳ ಮನಸ್ತಾಪ ಉಂಟಾಗಬಹುದು
ಬಟ್ಟೆಗಳನ್ನು ಬಾಗಿಲ ಹಿಂದೆ ಹಾಕುವ ಅಭ್ಯಾಸ ಇದ್ದರೆ ಅದು ನಿಮ್ಮ ವೃತ್ತಿ ಜೀವನದ ಮೇಲೆಯೂ ಪರಿಣಾಮ ಬೀರಬಹುದು
ಬಾಗಿಲ ಹಿಂದೆ ಬಟ್ಟೆ ಹಾಕುವುದರಿಂದ ಧನಾತ್ಮಕ ಶಕ್ತಿ ಕಡಿಮೆ ಆಗುತ್ತದೆ, ಅನಾರೋಗ್ಯ ಕಾಡುತ್ತದೆ, ಮನೆಯ ಪ್ರಗತಿಗೆ ಅಡ್ಡಿಯಾಗುತ್ತದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.