ವಿಜಯಪುರ ಸಿದ್ದೇಶ್ವರ ಸ್ವಾಮೀಜಿ ಪುಣ್ಯಸ್ಮರಣೆ ನೆನಪಿನ ನುಡಿಮುತ್ತುಗಳು 

By Umesha Bhatta P H
Jan 02, 2025

Hindustan Times
Kannada

ಈ ಜಗತ್ತು ಅಸ್ಥಿರವಾದರೂ ಇದರ ಹಿಂದೆ ಯಾವುದೋ ಒಂದು ಸ್ಥಿರವಾದ ವಸ್ತುವಿದೆ. ಅದು ಅಚಲ - ಅವಿಕಾರಿ, ಅಗಮ್ಯ-ಅಗೋಚರ

ಆಕಾಶದಲ್ಲಿರುವ ಗ್ರಹ, ತಾರೆ, ಮೇಘ ಮೊದಲಾದವುಗಳೆಲ್ಲವು ಚಲಿಸಿದರೂ ಆಕಾಶ ಮಾತ್ರ ಚಲಿಸುವುದಿಲ್ಲ, 

 ಪ್ರಚಂಡವಾದ ಗ್ರಹತಾರೆಗಳೇ ಮರೆಯಾಗಿ ಹೋಗುವಾಗ, ನಮ್ಮ ಮನೆ, ಮಠ, ಕೀರ್ತಿ, ವಾರ್ತೆ, ಧನ, ಕನಕ ಸ್ಥಿರವಾಗಿರುತ್ತವೆಯೇ?

ಒಂದು ಹಸುಗೂಸು ಮನೆಯಲ್ಲಿ ಏನೂ ಮಾಡುವುದಿಲ್ಲ. ಅದು ಸುಮ್ಮನೆ ನಕ್ಕರೆ ಸಾಕು ಮನೆಯಲ್ಲಿ ಸ್ವರ್ಗವೇ ಇಳಿಯುತ್ತದೆ.

ನಶ್ವರವಾದ ಪ್ರಾಪಂಚಿಕ ವಿಷಯ ವಸ್ತುಗಳ ಹಿಂದೆ ಅತಿಯಾಗಿ ಮನಸು ಹರಿಸಬೇಡಿ

ಬ್ರಹ್ಮಾಂಡವನ್ನೇ ಬೆಳಗುವ ರವಿಯಾದರೂ ಅವನಿಗೆ ಕಣ್ಣಿಲ್ಲ, ಕಾಲಿಲ್ಲ. 

 ಈ ವಿಶ್ವದಲ್ಲಿರುವ ವಸ್ತುಗಳೆಲ್ಲ ಅಸ್ಥಿರವಾದರೂ ಈ ವಿಶ್ವದ ಹಿಂದಿರುವ ಪರಮಸತ್ಯ ಪರಮಾತ್ಮನು ಮಾತ್ರ ಸುಶಾಶ್ವತ,

ದೇವರು ಕರುಣಿಸಿರುವ ತನು-ಮನ ಬುದ್ಧಿಯಲ್ಲಿ ಸತ್ಕಾರ್ಯ,ಸದ್ಭಾವ, ಸುಜ್ಞಾನ ಉಳ್ಳವರಾಗಿ ಸಂತಸದಿಂದಿರುವುದೇ ಧರ್ಮಜೀವನ.

ನಾವು ಎಲ್ಲರ ಕೂಡ ಹೊಂದಿಕೊಂಡು ಬಾಳಿದಾಗ ಮಾತ್ರ ನಮ್ಮ ಜೀವನವು ಪಾವನವಾಗುತ್ತದೆ. 

ನಮ್ಮ ನಡೆ ನುಡಿಯೆಲ್ಲವೂ ತಾಳಬದ್ಧ, ಲಯಬದ್ಧವಾಗಿದ್ದರೆ ಜೀವನವೇ ಸಂಗೀತಮಯವಾಗುತ್ತದೆ

ಸಾಂಪ್ರದಾಯಿಕ ಉಡುಗೆಯಲ್ಲಿ ಸಿಂಗಾರಗೊಂಡ ಮಹಾನಟಿ ಗಗನ