ಇಬ್ಬರು ಮಕ್ಕಳ ನಡುವೆ ಎಷ್ಟು ಅಂತರವಿರಬೇಕು; ವಿರುಷ್ಕಾ ದಂಪತಿಯಿಂದ ಕಲಿಯಿರಿ ಜೀವನ ಪಾಠ
By Jayaraj
Feb 21, 2024
Hindustan Times
Kannada
ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಯು ಎರಡನೇ ಮಗುವಿನ ತಂದೆ-ತಾಯಿ ಆಗಿದ್ದಾರೆ.
ಫೆಬ್ರವರಿ 15ರಂದು ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ವಮಿಕಾ ಮತ್ತು ಅಕಾಯ್ ನಡುವೆ 3 ವರ್ಷಗಳ ಅಂತರವಿಟ್ಟಿದ್ದಾರೆ.
ಹಾಗಿದ್ದರೆ ಇಬ್ಬರು ಮಕ್ಕಳ ನಡುವೆ ಎಷ್ಟು ವರ್ಷಗಳ ಅಂತರ ಇರಬೇಕು ಎಂಬುದನ್ನು ನೋಡೋಣ.
ಅಧ್ಯಯನಗಳ ಪ್ರಕಾರ, ಗರ್ಭಧಾರಣೆಯ ನಡುವೆ ಕನಿಷ್ಠ 18 ತಿಂಗಳ ಅಂತರವಿರಬೇಕು.
ಪ್ರೆಗ್ನೆನ್ಸಿ ಅಂತರವು 12 ತಿಂಗಳಿಗಿಂತ ಕಡಿಮೆ ಇದ್ದರೆ ಅಪಾಯಗಳಿವೆ.
ಅವಧಿಗೂ ಮುನ್ನ ಡೆಲಿವರಿ, ಅನಾರೋಗ್ಯ ಸೇರಿದಂತೆ ತಾಯಿಯ ಪ್ರಾಣಕ್ಕೂ ಅಪಾಯವಾಗುವ ಸಂಭವ ಇರುತ್ತದೆ.
ವೈದ್ಯರ ಪ್ರಕಾರ, ಪ್ರೆಗ್ನೆನ್ಸಿ ನಡುವೆ 18ರಿಂದ 24 ತಿಂಗಳ (2 ವರ್ಷ) ಅಂತರ ಇಡುವುದು ಆರೋರೋಗ್ಯಕರ.
ಗರ್ಭಧಾರಣೆ ನಡುವೆ 18 ತಿಂಗಳಿಗಿಂತ ಕಡಿಮೆ ಅಂತರವಿದ್ದರೆ, ಹುಟ್ಟುವ ಮಗುವಿನ ತೂಕ ಕಡಿಮೆಯಾಗುವ ಸಂಭವ ಹೆಚ್ಚು
ಒಂದು ವೇಳೆ ಮೊದಲ ಮಗು ಆಪರೇಷನ್ ಮೂಲಕ ಜನಿಸಿದರೆ, ಎರಡನೇ ಪ್ರಗ್ನೆನ್ಸಿಗೆ ಕನಿಷ್ಠ 2-3 ವರ್ಷಗಳ ಅಂತರ ಇರಬೇಕು.
2024ರ ಭಾರತದ ಟಾಪ್ 10 ಸಿರಿವಂತರು ಯಾರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ