ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನದ ನಂತರ ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ ಕ್ರಿಕೆಟಿಗ ವಿರಾಟ್ ಕೊಹ್ಲಿ, ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಆಧ್ಯಾತ್ಮಿಕ ಗುರು ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿ ಮಾಡಿದ್ದಾರೆ.
ಆಧ್ಯಾತ್ಮಿಕ ಗುರು ಭೇಟಿಯಾದ ಕೊಹ್ಲಿ
ಪ್ರೇಮಾನಂದ ಅವರನ್ನು ವಿರಾಟ್-ಅನುಷ್ಕಾ ಅವರು ಎರಡನೇ ಬಾರಿ ಭೇಟಿಯಾದರು. ಈ ಹಿಂದೆ, 2023ರ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭೇಟಿಯಾಗಿದ್ದರು. ಆ ಭೇಟಿಯ ನಂತರ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.
2ನೇ ಬಾರಿಗೆ ವಿರುಷ್ಕಾ ಭೇಟಿ
ಇದೀಗ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮತ್ತೊಮ್ಮೆ ಪ್ರೇಮಾನಂದ ಅವರನ್ನು ಭೇಟಿಯಾಗಿದ್ದಾರೆ. ಆಧ್ಯಾತ್ಮ ಮೇಲೆ ಒಲವು ಹೊಂದಿರುವ ವಿರುಷ್ಕಾ, ತಮ್ಮ ಮಕ್ಕಳನ್ನೂ ಅದೇ ದಿಕ್ಕಿನಲ್ಲಿ ಕರೆದೊಯ್ಯುತ್ತಿದ್ದಾರೆ. ಸೆಲೆಬ್ರಿಟಿ ಕಪಲ್ಸ್ ಕಳೆದ 3-4 ವರ್ಷಗಳಲ್ಲಿ ಭೇಟಿ ನೀಡಿದ ಆಧ್ಯಾತ್ಮಿಕ ಸ್ಥಳಗಳು ಯಾವುವು?
ಯಾವೆಲ್ಲಾ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ?
ವಿರಾಟ್ಗೆ ನೀಮ್ ಕರೋಲಿ ಬಾಬಾ ಮೇಲೆ ಅಪಾರವಾದ ನಂಬಿಕೆ. ಅವರು ಆಗಾಗ್ಗೆ ಉತ್ತರಾಖಂಡ್ನ ನೈನಿತಾಲ್‌ನಲ್ಲಿರುವ ಕೈಂಚಿ ಧಾಮ ಆಶ್ರಮಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ.
ಕೈಂಚಿ ಧಾಮ ಆಶ್ರಮ
ವಿರಾಟ್-ಅನುಷ್ಕಾ ದಂಪತಿ ಶ್ರೀಕೃಷ್ಣನ ನಗರಿ ವೃಂದಾವನದಲ್ಲಿರುವ ನೀಮ್ ಕರೋಲಿ ಬಾಬಾರ ಸಮಾಧಿಗೂ ಭೇಟಿ ನೀಡಿದ್ದರು.
ನೀಮ್ ಕರೋಲಿ ಬಾಬಾ ಆಶ್ರಮ
2023ರಲ್ಲಿ ವಿರಾಟ್ ಮತ್ತು ಅನುಷ್ಕಾ ಅವರು ಉಜ್ಜಯಿನಿಯಲ್ಲಿ ಬಾಬಾ ಮಹಾಕಾಲ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಆರತಿಯನ್ನೂ ಬೆಳಗಿಸಿದ್ದರು.
ಬಾಬಾ ಮಹಾಕಾಲ್
ಮಹಾಕಾಲ್ ದರ್ಶನದ ವೇಳೆ ವಿರಾಟ್ ತನ್ನ ಕುತ್ತಿಗೆಗೆ ರುದ್ರಾಕ್ಷಿ ಧರಿಸಿದ್ದರು. ಹಣೆಗೆ ಶ್ರೀಗಂಧ ಇಟ್ಟಿದ್ದರು. ಇಷ್ಟೇ ಅಲ್ಲ, ವಿರಾಟ್ ಸಾಂಪ್ರದಾಯಿಕ ಉಡುಗೆ ಧೋತಿ ಧರಿಸಿದ್ದರು.
ಸಾಂಪ್ರದಾಯಿಕ ಉಡುಗೆ
ಕೊಹ್ಲಿ ಮತ್ತು ಅನುಷ್ಕಾ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೂ ಭೇಟಿ ನೀಡಿದ್ದರು. ಇಲ್ಲಿ ಸಂತರಿಗಾಗಿ ಕೊಹ್ಲಿ ಔತಣಕೂಟವನ್ನೂ ಏರ್ಪಡಿಸಿದ್ದರು.