ಭಾರತದಲ್ಲಿ ಕೊಹ್ಲಿಯೇ ಕಿಂಗ್; ಬಾಲಿವುಡ್ ಸ್ಟಾರ್‌ಗಳ ಹಿಂದಿಕ್ಕಿದ ವಿರಾಟ್
AFP
By Jayaraj Nov 29, 2024
Hindustan Times Kannada
ಹಂಸಾ ಸಂಶೋಧನಾ ವರದಿಯು, ಭಾರತೀಯ ಕ್ರಿಕೆಟಿಗರು ಮತ್ತು ಬಾಲಿವುಡ್ ಸೆಲೆಬ್ರಿಟಿಗಳ ಸ್ಟಾರ್ ಪವರ್ ಹೋಲಿಕೆ ಮಾಡಿದೆ. ದೇಶದಲ್ಲಿ ಕ್ರಿಕೆಟ್ ಪ್ರಾಬಲ್ಯ ಎಷ್ಟಿದೆ ಎಂಬುದನ್ನು ಇದು ಬಹಿರಂಗಪಡಿಸಿದೆ.
AFP
ಭಾರತದ 36 ನಗರಗಳ 4,000 ಜನರ ಪ್ರತಿಕ್ರಿಯೆಗಳನ್ನು ಆಧರಿಸಿ ಸ್ಟಾರ್ ಪವರ್ ರ‍್ಯಾಂಕಿಂಗ್ ನೀಡಲಾಗಿದೆ.
AFP
ವಿರಾಟ್ ಕೊಹ್ಲಿ ಅವರು ನಟ ಶಾರುಖ್ ಖಾನ್ ಅವರನ್ನೂ ಹಿಂದಿಕ್ಕಿ ಭಾರತದ ಫೇಮಸ್ ಸೆಲೆಬ್ರಿಟಿಯಾಗಿದ್ದಾರೆ.
Pinterest
ಮಾಜಿ ಕ್ರಿಕೆಟಿಗ ಎಂಎಸ್ ಧೋನಿ 2ನೇ ಸ್ಥಾನದಲ್ಲಿದ್ದಾರೆ
ಸಚಿನ್ ತೆಂಡೂಲ್ಕರ್ 3ನೇ ಸ್ಥಾನದಲ್ಲಿದ್ದಾರೆ. ಅಗ್ರ ಮೂವರು ಕ್ರಿಕೆಟಿಗರೇ ಆಗಿದ್ದಾರೆ.
ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಮಿತಾಬ್ ಬಚ್ಚನ್ ಕ್ರಮವಾಗಿ 4, 5 ಮತ್ತು 6ನೇ ಸ್ಥಾನ ಪಡೆದಿದ್ದಾರೆ.
Pinterest
ಪಟ್ಟಿಯಲ್ಲಿ ದಕ್ಷಿಣ ಭಾರತದ ಏಕೈಕ ನಟ ಅಲ್ಲು ಅರ್ಜುನ್ 7ನೇ ಸ್ಥಾನ ಪಡೆದಿದ್ದಾರೆ.
Pinterest
ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ 8 ಮತ್ತು 9 ನೇ ಸ್ಥಾನದಲ್ಲಿದ್ದಾರೆ.
Pinterest
ನಟಿ ದೀಪಿಕಾ ಪಡುಕೋಣೆ 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.