ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ. ವಿಶ್ವದ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರು.
ಕೊಹ್ಲಿ ನಾಯಕನಾಗಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅಲ್ಲದೆ, ಧೋನಿ, ರೋಹಿತ್ ಕ್ಯಾಪ್ಟನ್ಸಿಯಲ್ಲೂ ರನ್ ಮಳೆ ಸುರಿಸಿದ್ದಾರೆ.
ವಿರಾಟ್ ಈ ರಾಜಕೀಯ ನಾಯಕನ ನಾಯಕತ್ವದಲ್ಲಿ ಆಡಿದ್ದಾರೆ ಎಂಬುದನ್ನು ನಿಮಗೆ ಗೊತ್ತಿದೆಯೇ? ಆತನ ಹೆಸರು ತೇಜಸ್ವಿ ಯಾದವ್.
ಬಿಹಾರದ ಖ್ಯಾತ ನಾಯಕರಲ್ಲಿ ಒಬ್ಬರಾದ ತೇಜಸ್ವಿ ಯಾದವ್ ಅವರು ತನ್ನ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಆಡಿದ್ದಾರೆ ಎಂದು ಹೇಳಿದ್ದಾರೆ.
ತೇಜಸ್ವಿ ಯಾದವ್ ರಾಜಕೀಯಕ್ಕೆ ಸೇರುವುದಕ್ಕೂ ಮುನ್ನ ರಾಜ್ಯಮಟ್ಟದ ಕ್ರಿಕೆಟ್ ಆಡುತ್ತಿದ್ದರು. ಅವರು ಆರ್ಜೆಡಿ ಪಕ್ಷದ ನಾಯಕ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತನ್ನ ನಾಯಕತ್ವದಲ್ಲಿ ಕೊಹ್ಲಿ ಆಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಹೇಳಿಕೆ ಸಾಕಷ್ಟು ವೈರಲ್ ಆಗಿದೆ.
ಆರ್ಜೆಡಿ ನಾಯಕ ವೃತ್ತಿಪರವಾಗಿ ನಾನು ಉತ್ತಮ ಕ್ರಿಕೆಟಿಗನಾಗಿದ್ದೆ. ನನ್ನ ತಂಡದ ಅರ್ಧಕ್ಕೂ ಅಧಿಕ ಮಂದಿ ಭಾರತೀಯ ತಂಡದಲ್ಲಿ ಆಡುತ್ತಿದ್ದಾರೆ ಎಂದಿದ್ದಾರೆ.
ನಾನು ಮೂಳೆ ಸೆಳೆತಕ್ಕೆ ಒಳಗಾದ ಕಾರಣ ಕ್ರಿಕೆಟ್ ಬಿಡಬೇಕಾಯಿತು. ನಾನು ಐಪಿಎಲ್ನಲ್ಲೂ ಒಪ್ಪಂದ ಪಡೆದಿದ್ದೆ. ಡೆಲ್ಲಿ ಡೆವಿಲ್ಸ್ ತಂಡ ಖರೀದಿಸಿತ್ತು. 8 ಲಕ್ಷಕ್ಕೆ ಖರೀದಿಸಿತ್ತು ಎಂದಿದ್ದಾರೆ.
ನಾಲ್ಕು ಸೀಸನ್‌ಗಳಲ್ಲಿ ಡೆಲ್ಲಿ ತಂಡದ ಭಾಗವಾಗಿದ್ದ ತೇಜಸ್ವಿ, ಬಿಹಾರದ ಮಾಜಿ ಉಪಮುಖ್ಯಮಂತ್ರಿಯೂ ಆಗಿದ್ದರು.