ಆಸ್ಟ್ರೇಲಿಯಾ ನೆಲದಲ್ಲಿ ವಿರಾಟ್ ಕೊಹ್ಲಿ ರೆಕಾರ್ಡ್ಸ್

By Prasanna Kumar P N
Nov 18, 2024

Hindustan Times
Kannada

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್​ ಗವಾಸ್ಕರ್ ಟ್ರೋಫಿ ನವೆಂಬರ್ 22ರಿಂದ ಶುರುವಾಗಲಿದೆ.

ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಇಡೀ ಕ್ರಿಕೆಟ್ ಜಗತ್ತೇ ಕಾತರದಿಂದ ಕಾಯುತ್ತಿದೆ.

ಈ ಸರಣಿಯಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೂ ನಿರೀಕ್ಷೆ ಹೆಚ್ಚಾಗಿದೆ.

ಹಾಗಿದ್ದರೆ ಆಸ್ಟ್ರೇಲಿಯಾ ನೆಲದಲ್ಲಿ ಕೊಹ್ಲಿ ದಾಖಲೆಗಳು ಹೇಗಿವೆ? ಇಲ್ಲಿದೆ ವಿವರ.

ಆಸೀಸ್ ನೆಲದಲ್ಲಿ 13 ಪಂದ್ಯಗಳ 25 ಇನ್ನಿಂಗ್ಸ್​​ಗಳಲ್ಲಿ 54.08ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

ಕಾಂಗರೂ ನಾಡಿನಲ್ಲಿ 6 ಸೆಂಚುರಿ, 4 ಅರ್ಧಶತಕ ಸಹಿತ 1352 ರನ್ ಕಲೆ ಹಾಕಿದ್ದಾರೆ. ಗರಿಷ್ಠ ಸ್ಕೋರ್ 169.

151 ಬೌಂಡರಿ ಸಿಡಿಸಿರುವ ಕೊಹ್ಲಿ, ಕೇವಲ 3 ಸಿಕ್ಸರ್​ ಸಿಡಿಸಿದ್ದಾರೆ. 53.14ರ ಬ್ಯಾಟಿಂಗ್ ಸ್ಟ್ರೈಕ್​ರೇಟ್ ಹೊಂದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದಿದೆ.

ಅಲ್ಲು ಅರ್ಜುನ್ ಅಭಿನಯದ 10 ಸಿನಿಮಾಗಳ ಪಟ್ಟಿ ಇಲ್ಲಿದೆ ಗಮನಿಸಿ