ಭಾರತದ 5ನೇ ಶ್ರೀಮಂತ ಕ್ರಿಕೆಟಿಗ ಸೆಹ್ವಾಗ್; ಎಷ್ಟು ಕೋಟಿ ಒಡೆಯ ವೀರು?
By Prasanna Kumar P N Jan 24, 2025
Hindustan Times Kannada
ಕ್ರಿಕೆಟ್ ಲೆಜೆಂಡ್ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು, ಹಲವು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
2004ರಲ್ಲಿ ಆರತಿ ಅವರನ್ನು ಸೆಹ್ವಾಗ್ ವಿವಾಹವಾಗಿದ್ದರು. ಪ್ರಸ್ತುತ ಈ ಜೋಡಿಯು ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನೊಬ್ಬರು ಅನ್ಫಾಲೋ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಂಪತಿಗಳ ಪ್ರತ್ಯೇಕತೆ ವದಂತಿಗಳ ನಡುವೆಯೇ ದಿಗ್ಗಜ ಕ್ರಿಕೆಟಿಗನ ಆಸ್ತಿ ಮೌಲ್ಯ ಎಷ್ಟಿದೆ ಎಂಬುದರ ಕುರಿತು ಹುಡುಕಾಟ ಜೋರಾಗಿ ನಡೆಯುತ್ತಿದೆ. ಸೆಹ್ವಾಗ್ ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು.
ಸೆಹ್ವಾಗ್ ಅವರು ಆಸ್ತಿ ಮೌಲ್ಯ 340-350 ಕೋಟಿ ಇದೆ ಎಂದು ಹೇಳಲಾಗಿದೆ. ಭಾರತೀಯ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ.
2024ರ ಕ್ಯಾಲೆಂಡರ್ ವರ್ಷದಲ್ಲಿ ಸೆಹ್ವಾಗ್ 30 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. 24 ಕೋಟಿ ಕೇವಲ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಂದಲೇ ಬರುತ್ತವೆ ಎಂದು ವರದಿಗಳು ಹೇಳುತ್ತಿವೆ.
ಸೆಹ್ವಾಗ್ ದೆಹಲಿಯ ಹೌಜ್ ಖಾಸ್‌ನಲ್ಲಿ ಐಷಾರಾಮಿ ಮಹಲ್ವೊಂದನ್ನು ಹೊಂದಿದ್ದಾರೆ. ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ಸ್ಪರ್ ಮತ್ತು ಬಿಎಂಡಬ್ಲ್ಯು 5 ಸಿರೀಸ್ ಸೇರಿದಂತೆ ಅತ್ಯಾಧುನಿಕ ಕಾರುಗಳನ್ನು ಹೊಂದಿದ್ದಾರೆ.
ಸೆಹ್ವಾಗ್ ಅವರು ಹರಿಯಾಣದಲ್ಲಿ ಸ್ಥಾಪಿಸಲಾದ ಸೆಹ್ವಾಗ್ ಇಂಟರ್ನ್ಯಾಷನಲ್ ಶಾಲೆಯೊಂದನ್ನು ನಿರ್ಮಿಸಿದ್ದಾರೆ. 2015ರಲ್ಲಿ ನಿವೃತ್ತಿ ಹೊಂದಿದ ಬಳಿಕ ಸೆಹ್ವಾಗ್ ಕಾಮೆಂಟರಿ ಪ್ಯಾನೆಲ್‌ನಲ್ಲಿದ್ದರು.
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯ ವಿರೋಧಿ ಡೋಪಿಂಗ್ ಮೇಲ್ಮನವಿ ಸಮಿತಿ ಸದಸ್ಯರಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಡೀಡಸ್, ರೀಬಾಕ್, ಬೂಸ್ಟ್, ಸ್ಯಾಮ್‌ಸಂಗ್, ಹೀರೋ ಹೋಂಡಾ ಸೇರಿ ಹಲವು ಬ್ರ್ಯಾಂಡ್ಗಳೊಂದಿಗೆ ಅಸೋಸಿಯೇಟ್ ಆಗಿದ್ದಾರೆ.
ಜಿಎಸ್ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು