ತೂಕ ಏರಿಕೆಗೆ ನೆರವಾಗುವ ಅಧಿಕ ಕ್ಯಾಲೊರಿ ಹೊಂದಿರುವ 9 ಆಹಾರಗಳು 

Image Credits : Adobe Stock

By Reshma
May 05, 2025

Hindustan Times
Kannada

ನೀವು ತೂಕ ಹೆಚ್ಚಿಸಿಕೊಳ್ಳಲು ಬಯಸಿದರೆ, ಕ್ಯಾಲೊರಿ ಅಂಶ ಹೆಚ್ಚಿರುವ ಆಹಾರಗಳನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸುವುದು ಮುಖ್ಯವಾಗುತ್ತದೆ. ತೂಕ ಹೆಚ್ಚಳಕ್ಕೆ ನೆರವಾಗುವ 9 ಹೈ ಕ್ಯಾಲೊರಿ ಆಹಾರಗಳಿವು 

Image Credits : Adobe Stock

ಆವಕಾಡೊ: ಇದು ಆರೋಗ್ಯಕರ ಕೊಬ್ಬಿನಾಂಶದಿಂದ ತುಂಬಿರುತ್ತದೆ ಮತ್ತು ಕ್ಯಾಲೊರಿಗಳ ಉತ್ತಮ ಮೂಲವಾಗಿದೆ. ಅವಕಾಡೊ ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ 

Image Credits : Adobe Stock

ಒಣಹಣ್ಣುಗಳು: ಬಾದಾಮಿ, ವಾಲ್‌ನಟ್‌ ಮತ್ತು ಗೋಡಂಬಿಯಂತಹ ಒಣಹಣ್ಣುಗಳಲ್ಲಿ ಕ್ಯಾಲೊರಿ ಸಮೃದ್ಧವಾಗಿದೆ ಮತ್ತು ಇದರಲ್ಲಿ ಆರೋಗ್ಯಕರ ಕೊಬ್ಬು ಮತ್ತು ಪ್ರೊಟೀನ್‌ ಕೂಡ ಇರುತ್ತದೆ 

Image Credits : Adobe Stock

ಪೀನಟ್‌ ಬಟರ್‌, ಬಾದಾಮಿ ಬೆಣ್ಣೆಯಂತಹ ಒಣಹಣ್ಣುಗಳಿಂದ ತಯಾರಿಸಿದ ಉತ್ಪನ್ನಗಳಲ್ಲಿ  ಆರೋಗ್ಯಕರ ಕೊಬ್ಬು ಮತ್ತು ಪ್ರೊಟೀನ್ ಅಧಿಕವಾಗಿರುತ್ತದೆ 

Image Credits : Adobe Stock

ಚೀಸ್‌ನಲ್ಲಿ ಕೊಬ್ಬು ಮತ್ತು ಪ್ರೊಟೀನ್ ಅಧಿಕವಾಗಿರುತ್ತದೆ, ಇದು ಕ್ಯಾಲೊರಿ ಸಮೃದ್ಧ ಆಹಾರವಾಗಿದೆ 

Image Credits : Adobe Stock

ಕ್ಯಾಲೊರಿ ಸಮೃದ್ಧ ಸ್ಮೂಥಿಗಳು ಮತ್ತು ಪಾನೀಯಗಳನ್ನು ಕುಡಿಯುವುದರಿಂದಲೂ ದೇಹದಲ್ಲಿ ಕ್ಯಾಲೊರಿ ಹೆಚ್ಚಿರುವಂತೆ ನೋಡಿಕೊಳ್ಳಬಹುದು.  ಹಣ್ಣುಗಳು, ಮೊಸರು, ಹಾಲು, ಪ್ರೊಟೀನ್ ಪುಡಿ ಇಂಥವನ್ನೂ ಸೇರಿಸಿಕೊಳ್ಳಬಹುದು

Image Credits : Adobe Stock

ಹಾಲಿನಲ್ಲಿ ಪ್ರೊಟೀನ್, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ. ನೀವು ತೂಕ ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ ತಪ್ಪದೇ ಹಾಲು ಕುಡಿಯಲು ಪ್ರಯತ್ನಿಸಿ 

Image Credits : Adobe Stock

ವೈಟ್‌ರೈಸ್‌ನಲ್ಲಿ ಕ್ಯಾಲೊರಿ ಅಂಶ ಹೆಚ್ಚಿರುತ್ತದೆ. ಇದಕ್ಕಾಗಿ ನೀವು ನಿಮ್ಮ ಡಯೆಟ್‌ ಕ್ರಮದಲ್ಲಿ ವೈಟ್ ರೈಸ್ ಸೇರಿಸಿ 

Image Credits : Adobe Stock

ಆಲೂಗೆಡ್ಡೆ ಕ್ಯಾಲೊರಿಗಳಿಂದ ಸಮೃದ್ಧವಾಗಿರುವ ಮತ್ತೊಂದು ಪಿಷ್ಟಯುಕ್ತ ಆಹಾರವಾಗಿದೆ. ಇದು ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ 

Image Credits : Adobe Stock

ಡಾರ್ಕ್ ಚಾಕೊಲೇಟ್ ವಿಶೇಷವಾಗಿ ಹೆಚ್ಚಿನ ಕೋಕೋ ಅಂಶವನ್ನು ಹೊಂದಿರುವಂಥವುಗಳಲ್ಲಿ  ಕ್ಯಾಲೊರಿ ಸಮೃದ್ಧವಾಗಿರುತ್ತದೆ, ಇದನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಏರಿಕೆಯಾಗುತ್ತದೆ 

Image Credits : Adobe Stock

ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು