ಮಹಿಳೆಯರಲ್ಲಿ ಇದ್ದಕ್ಕಿದ್ದಂತೆ ತೂಕ ಏರಿಕೆಯಾಗಲು 10 ಪ್ರಮುಖ ಕಾರಣಗಳಿವು 

Canva

By Reshma
Nov 18, 2024

Hindustan Times
Kannada

ಕಡಿಮೆ ಪೋಷಕಾಂಶ ಹಾಗೂ ಹೆಚ್ಚು ಕ್ಯಾಲೊರಿ ಅಂಶ ಇರುವ ಸಂಸ್ಕರಿಸಿದ ಆಹಾರ, ಸಕ್ಕರೆ ಅಂಶ ಹೆಚ್ಚಿರುವ ಪಾನೀಯ ಹಾಗೂ ಫಾಸ್ಟ್‌ಫುಡ್‌ಗಳ ಅತಿಯಾದ ಸೇವನೆಯು ತೂಕ ಏರಿಕೆಯಾಗಲು ಕಾರಣವಾಗುತ್ತದೆ

Canva

ದೈಹಿಕ ಚಟುವಟಿಕೆ ಇಲ್ಲದ ಜಡ ಜೀವನಶೈಲಿಯು ದೇಹದಲ್ಲಿ ಕ್ಯಾಲೊರಿ ಹೆಚ್ಚಲು ಕಾರಣವಾಗುತ್ತದೆ. ಇದರಿಂದಲೂ ತೂಕ ಏರಿಕೆಯಾಗುತ್ತದೆ

Canva

ಅನುವಂಶೀಯ ಅಂಶಗಳು ಚಯಾಪಚಯ, ಕೊಬ್ಬಿನಾಂಶ ಸಂಗ್ರಹ ಹಾಗೂ ಒಟ್ಟಾರೆ ದೇಹ ತೂಕದ ಮೇಲೆ ಪ್ರಭಾವ ಬೀರಬಹುದು. ಇದು ತೂಕ ಹೆಚ್ಚಲು ಕಾರಣವಾಗುತ್ತದೆ 

Canva

ಅತಿಯಾದ ಒತ್ತಡವು ಹೆಚ್ಚು ತಿನ್ನಲು ಹಾಗೂ ಅನಾರೋಗ್ಯಕರ ಆಹಾರ ಸೇವನೆಗೆ ಕಾರಣವಾಗಬಹುದು. ಇದರಿಂದಲೂ ತೂಕ ಏರಿಕೆಯಾಗುತ್ತದೆ  

Canva

ಹೈಪೊಥೈರಾಯಿಡಿಸಮ್‌ ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್‌ನಂತಹ ಆರೋಗ್ಯ ಸಮಸ್ಯೆಗಳು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ತೂಕ ಹೆಚ್ಚುವಂತೆ ಮಾಡುತ್ತದೆ

Canva

ನಿದ್ದೆಯ ಕೊರತೆಯು ಹಾರ್ಮೋನುಗಳು ಮತ್ತು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಹಸಿವನ್ನು ಹೆಚ್ಚಿಸುತ್ತದೆ ಮತ್ತು ತೂಕ  ಏರಿಕೆಗೆ ಕಾರಣವಾಗುತ್ತದೆ 

Canva

ಖಿನ್ನತೆ ನಿವಾರಿಸುವ ಔಷಧಿಗಳು, ಆ್ಯಂಟಿ ಸೈಕೊಟಿಕ್ಸ್ ಹಾಗೂ ಕಾರ್ಟಿಕೊಸ್ಟೆರಾಯ್ಡ್‌ಗಳು ಸೇರಿದಂತೆ ಕೆಲವು ಔಷಧಿಗಳ ಅಡ್ಡ ‍‍ಪರಿಣಾಮದಿಂದಲೂ ತೂಕ ಏರಿಕೆಯಾಗುತ್ತದೆ 

Canva

ದೈಹಿಕ ಶಕ್ತಿಗೆ ಅಗತ್ಯವಿರುವುದಕ್ಕಿಂತ ಹೆಚ್ಚಾಗಿ ತಿನ್ನುವುದು ಕೂಡ ದೇಹದಲ್ಲಿ ಕೊಬ್ಬಿನಾಂಶ ಸಂಗ್ರಹವಾಗಲು ಹಾಗೂ ತೂಕ ಹೆಚ್ಚಲು ಕಾರಣವಾಗುತ್ತದೆ 

Canva

ವಯಸ್ಸಾಗುತ್ತಿದ್ದಂತೆ ಚಯಾಪಚಯವು ನಿಧಾನವಾಗುತ್ತದೆ ಮತ್ತು ಸ್ನಾಯುವಿನ ದ್ರವ್ಯರಾಶಿ ಕಡಿಮೆಯಾಗುತ್ತದೆ. ಇದರಿಂದ ಸುಲಭವಾಗಿ ತೂಕ ಕಡಿಮೆಯಾಗುತ್ತದೆ 

Canva

ದೀರ್ಘಕಾಲದ ಒತ್ತಡವು ಕಾರ್ಟಿಸೋಲ್ ಬಿಡುಗಡೆಗೆ ಕಾರಣವಾಗುತ್ತದೆ. ಇದು ಹಸಿವನ್ನು ಹೆಚ್ಚಿಸುತ್ತದೆ. ತೂಕ ಏರಿಕೆಗೂ ಇದು ಮೂಲವಾಗುತ್ತದೆ. ವಿಶೇಷವಾಗಿ ಇದರಿಂದ ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹವಾಗುತ್ತದೆ  

Canva

ಭಾಗವತ ಮತ್ತು ಭಗವದ್ಗೀತೆ ನಡುವಿನ ವ್ಯತ್ಯಾಸವೇನು