ಕಡಿಮೆ ಕ್ಯಾಲೊರಿ ಹೊಂದಿರುವ ತರಕಾರಿ ಜ್ಯೂಸ್‌ಗಳು ತೂಕ ಇಳಿಕೆಗೆ ಬೆಸ್ಟ್. ನೀವು ತೂಕ ಇಳಿಸುವ ಯೋಚನೆ ಮಾಡಿದ್ದರೆ ನಿಮ್ಮ ಡಯೆಟ್ ಕ್ರಮದಲ್ಲಿ ಈ ಪಾನೀಯಗಳನ್ನೂ ಸೇರಿಸಿಕೊಳ್ಳಿ.
ಬೀಟ್‌ರೂಟ್ ಜ್ಯೂಸ್
ಇದು ಕಡಿಮೆ ಕ್ಯಾಲೊರಿ ಹೊಂದಿದ್ದು, ನಾರಿನಾಂಶ ಸಮೃದ್ಧವಾಗಿರುತ್ತದೆ. ದಿನವಿಡೀ ಹೊಟ್ಟೆ ತುಂಬಿದಂತಿದ್ದು, ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಕ್ಯಾರೆಟ್ ಜ್ಯೂಸ್
ಕ್ಯಾರೆಟ್ ಜ್ಯೂಸ್
ಕ್ಯಾರೆಟ್‌ನಲ್ಲೂ ಕ್ಯಾಲೊರಿ ಕಡಿಮೆ ಇದ್ದು ಇದು ವಿಟಮಿನ್ ಎಯಿಂದ ಸಮೃದ್ಧವಾಗಿರುತ್ತದೆ. ಇದರಲ್ಲಿರುವ ಆರೋಗ್ಯಕರ ಕ್ಯಾರೊಟಿನೈಡ್ಸ್‌ಗಳು ಹಸಿವನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆ ಹೆಚ್ಚಲು ಇದು ಸಹಕಾರಿ.
ಸೊಪ್ಪುಗಳ ಜ್ಯೂಸ್
ಕೇಲ್, ಪಾಲಕ್, ಕ್ಯಾಬೇಜ್ ಸೊಪ್ಪಿನ ಜ್ಯೂಸ್‌ನಲ್ಲಿ ಆಂಟಿಆಕ್ಸಿಡೆಂಟ್ ಹಾಗೂ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದರಲ್ಲಿ ಸಕ್ಕರೆಯಂಶ ಕಡಿಮೆ ಇರುತ್ತದೆ.
ಕುಂಬಳಕಾಯಿ ಜ್ಯೂಸ್
ಕುಂಬಳಕಾಯಿ ಜ್ಯೂಸ್ ದೇಹವನ್ನು ಹೈಡ್ರೇಟ್ ಮಾಡುವ ಜೊತೆಗೆ ದೇಹದಲ್ಲಿನ ವಿಷಾಂಶವನ್ನು ಹೊರ ಹಾಕುತ್ತದೆ. ಇದರಲ್ಲಿ ನೀರಿನಾಂಶ ಸಮೃದ್ಧವಾಗಿರುತ್ತದೆ. ಇದು ತೂಕ ಇಳಿಕೆಗೆ ಬೆಸ್ಟ್.
ಆಲೊವೆರಾ ಜ್ಯೂಸ್
ಆಲೊವೆರಾ ಜ್ಯೂಸ್ ಚಯಾಪಚಯ ವೃದ್ಧಿಯಾಗಲು ಸಹಾಯ ಮಾಡುತ್ತದೆ. ದೇಹದ ಕೊಬ್ಬು ಕರಗಲು ಇದು ಬೆಸ್ಟ್.
WPL 2025: ಅತಿ ಹೆಚ್ಚು ರನ್ ಗಳಿಸಿದ ಟಾಪ್ 8 ಆಟಗಾರ್ತಿಯರು