50 ಕೆಜಿ ತೂಕ ಇಳಿಸಿಕೊಂಡ ನಟ ಅರ್ಜುನ್ ಕಪೂರ್ ಫಿಟ್ನೆಸ್ ಪಯಣ ಹೀಗಿತ್ತು 

By Reshma
Jan 16, 2025

Hindustan Times
Kannada

ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ತಮ್ಮ ಫಿಟ್‌ನೆಸ್‌ ಕಹಾನಿ ಸಖತ್ ಇಂಟರೆಸ್ಟಿಂಗ್ ಆಗಿದೆ   

ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ಅರ್ಜುನ್ ತೂಕ 140 ಕೆಜಿಗಿಂತಲೂ ಹೆಚ್ಚಿತ್ತು. ಅವರು ತೂಕ ಕಡಿಮೆ ಮಾಡಿಕೊಂಡು ಸಿನಿಮಾರಂಗಕ್ಕೆ ಬರುವ ಯೋಚನೆ ಮಾಡಿದ್ರು 

ಇಂತಿಪ್ಪ ನಟ ಸಮತೋಲಿತ ಆಹಾರ ಹಾಗೂ ವ್ಯಾಯಾಮದಿಂದ 50 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದರು. ಇದನ್ನು ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ 

ಇವರು ಫಿಟ್ನೆಸ್‌ ಪಯಣ ಆರಂಭಿಸಿದಾಗ ಬೆಳಿಗ್ಗೆ ಮೊಟ್ಟೆಯ ಬಳಿಭಾಗ ಮತ್ತು ಟೋಸ್ಟ್ ತಿನ್ನುತ್ತಿದ್ದರು. ಊಟದಲ್ಲಿ ಚಿಕನ್‌, ಚಪಾತಿ, ಸಬ್ಜಿ ಹಾಗೂ ದಾಲ್ ಇಷ್ಟನ್ನೇ ಬಳಸುತ್ತಿದ್ದರು 

ಸಂಜೆ ಸ್ನ್ಯಾಕ್ಸ್ ಸಮಯದಲ್ಲಿ ತಾಜಾ ಹಣ್ಣುಗಳನ್ನು ತಿನ್ನುತ್ತಿದ್ದರು. ಪ್ರೊಟೀನ್ ಶೇಕ್ ಕುಡಿಯುತ್ತಿದ್ದರು. ರಾತ್ರಿ ಊಟಕ್ಕೆ ಅವರು ಮೀನು, ರೈಸ್ ಹಾಗೂ ಕ್ವಿನೋವಾ ಬ್ರೆಡ್ ತಿನ್ನುತ್ತಿದ್ದರು 

ದೇಹದಲ್ಲಿ ಕ್ಯಾಲೊರಿ ಕಡಿಮೆ ಮಾಡಲು ಅರ್ಜುನ್ ತಪ್ಪದೇ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದರು 

ದೇಹದಲ್ಲಿ ಹೆಚ್ಚುವರಿ ಕ್ಯಾಲೊರಿ ಕಡಿಮೆ ಮಾಡಲು ಜಿಮ್ ಜೊತೆ ಈಜಲು ಹೋಗುತ್ತಿದ್ದರು. ಈಜುವುದರಿಂದ ಬೊಜ್ಜು ಕಡಿಮೆಯಾಗುತ್ತದೆ 

ಮೊದಲು ಜಂಕ್‌ ಪುಡ್ ಹೆಚ್ಚು ತಿನ್ನುತ್ತಿದ್ದ ಅವರು ತೂಕ ಇಳಿಸುವ ಸಮಯದಲ್ಲಿ ಜಂಕ್ ಫುಡ್‌ಗೆ ಬೈ ಹೇಳಿದ್ದರು

ತೂಕ ಕಡಿಮೆ ಮಾಡಿಕೊಂಡ ಅರ್ಜುನ್‌ ತಮಗಿದ್ದ ಬ್ಯಾಲೆನ್ಸ್ ಡಿಸಾರ್ಡರ್, ಅಸ್ತಮಾವನ್ನ ಸಮಸ್ಯೆಯನ್ನೂ ಕೂಡ ನಿವಾರಿಸಿಕೊಂಡಿದ್ದರು 

ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File