ತೂಕ ಇಳಿಕೆಗೆ ನೆರವಾಗಲು ಜಿಮ್‌ಗೆ ಹೋಗಬೇಕು ಅಂತೇನಿಲ್ಲ, ಮನೆಯಲ್ಲೇ ನಾವು ಮಾಡುವ ಕೆಲಸಗಳು ಜಡ ಜೀವನಶೈಲಿಯನ್ನು ತಡೆಯಲು ಸಹಾಯ ಮಾಡುತ್ತವೆ. ಈ ಕೆಲವು ಮನೆಗೆಲಸಗಳು ದೇಹದ ಚಲನೆಯನ್ನು ಉತ್ತೇಜಿಸಿ, ತೂಕ ನಷ್ಟಕ್ಕೆ ನೆರವಾಗುತ್ತವೆ.
ಮನೆ ಒರೆಸುವುದು
ನೆಲ ಒರೆಸುವುದರಿಂದ ದೇಹದ ಕೋರ್ ಸ್ನಾಯುಗಳಿಗೆ ವ್ಯಾಯಾಮ ಸಿಗುತ್ತದೆ. ಇದು ಗಂಟೆಗೆ 150-250 ಕ್ಯಾಲೊರಿ ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಬಟ್ಟೆ ಒಗೆದು, ಒಣಗಿಸುವುದು
ಬಟ್ಟೆ ಒಗೆಯುವಾಗ ಬಾಗುವುದು, ಎತ್ತುವುದು ಹಾಗೂ ಬಟ್ಟೆ ಒಣಗಿಸುವುದು ಪ್ರತಿ ಗಂಟೆಗೆ 100-200 ಕ್ಯಾಲೊರಿ ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಧೂಳು ತೆಗೆಯುವುದು
ಮನೆಯ ಧೂಳು ಒರೆಸುವುದು, ತೆಗೆಯುವ ಕೆಲಸ ಮಾಡುವುದರಿಂದ ಗಂಟೆಗೆ 100 ರಿಂದ 200 ಕ್ಯಾಲೊರಿ ಬರ್ನ್ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ವಾಶ್‌ರೂಮ್ ಸ್ವಚ್ಛ ಮಾಡುವುದು
ಬಾತ್‌ರೂಮ್ ಸ್ವಚ್ಛ ಮಾಡುವಾಗ ಕಾಮೋಡ್, ಗೋಡೆಗಳನ್ನು ತಿಕ್ಕಿ ತೊಳೆಯಬೇಕಾಗುತ್ತದೆ. ಇದು ಸಂಪೂರ್ಣ ದೇಹದ ವ್ಯಾಯಾಮವನ್ನು ಉತ್ತೇಜಿಸುತ್ತದೆ. ಇದರಿಂದ ಗಂಟೆಗೆ 150-300 ಕ್ಯಾಲೊರಿ ಬರ್ನ್ ಆಗುತ್ತದೆ.
ಗಾರ್ಡನಿಂಗ್
ಗಾರ್ಡನ್‌ನಲ್ಲಿ ಗಿಡ ನೆಡುವುದು, ಕಳೆ ಕೀಳುವುದು, ಸ್ವಚ್ಛ ಮಾಡುವುದು ಇಂತಹ ಕೆಲಸಗಳಿಂದ ಗಂಟೆಗೆ 200-400 ರಷ್ಟು ಕ್ಯಾಲೋರಿ ಕಡಿಮೆಯಾಗುತ್ತದೆ.