ದೇಹದ ಕೊಬ್ಬು ಕರಗಿಸಿ, ತೂಕ ಇಳಿಕೆಗೆ ನೆರವಾಗುವ 10 ಹಣ್ಣುಗಳಿವು 

By Reshma
Jun 10, 2024

Hindustan Times
Kannada

ಹಣ್ಣುಗಳ ಸೇವನೆಯಿಂದ ತೂಕ ಇಳಿಯೋದು ಖಂಡಿತ. ಇವು ಉತ್ಕರ್ಷಣ ನಿರೋಧಕಗಳು ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುವ ಅಗತ್ಯ ಜೀವಸತ್ವಗಳು ಹಾಗೂ ಖನಿಜಗಳನ್ನು ಹೊಂದಿರುತ್ತವೆ. ಹಾಗಾದರೆ ಕೊಬ್ಬು ಕರಗಿಸಿ, ದೇಹ ತೂಕ ಕಡಿಮೆ ಮಾಡುವ 10 ಹಣ್ಣುಗಳು ಯಾವುದು ನೋಡಿ. 

ಸೇಬುಹಣ್ಣುಗಳು ಕಡಿಮೆ ಕ್ಯಾಲೊರಿ ಹೊಂದಿರುತ್ತವೆ. ಇದರಲ್ಲಿ ಆಹಾರದ ನಾರಿನಾಂಶ, ಕ್ಯಾರೊಟೆಂಜಿಡ್‌ಗಳು ಮತ್ತು ಪಾಲಿಫಿನಾಲ್‌ ಅಂಶ ಸಮೃದ್ಧವಾಗಿರುತ್ತದೆ. ಇದು ಹಸಿವನ್ನು ನೀಗಿಸಿ, ತೂಕ ನಷ್ಟವನ್ನು ಉತ್ತೇಜಿಸುತ್ತದೆ. 

ಸ್ಟ್ರಾಬೆರಿ, ರಸ್‌ಬೆರಿಯಂತಹ ಬೆರಿ ಹಣ್ಣುಗಳು ವಿವಿಧ ಪೋಷಕಾಂಶಗಳಿಂದ ತುಂಬಿರುತ್ತವೆ. ಈ ಹಣ್ಣಿನಲ್ಲಿ ಕೊಬ್ಬನ್ನು ಸುಡುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ ಸಿ ಸಮೃದ್ಧವಾಗಿದ್ದು, ತೂಕ ನಷ್ಟಕ್ಕೆ ಸಹಾಯ ಮಾಡುತ್ತವೆ. 

ಅತ್ಯದಿಕ ನಾರಿನಾಂಶ ಹೊಂದಿರುವ ಬೆಣ್ಣೆ ಹಣ್ಣುಗಳು ತೂಕ ನಷ್ಟವನ್ನು ಉತ್ತೇಜಿಸಲು ಅತ್ಯುತ್ತಮವಾಗಿವೆ. ಇದು ಚಯಾಪಚಯವನ್ನು ವೃದ್ಧಿಸಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. 

ಕಲ್ಲಂಗಡಿ, ಕರ್ಜೂರದಂತಹ ಹಣ್ಣುಗಳಲ್ಲಿ ನೀರಿನಾಂಶ ಹೇರಳವಾಗಿರುತ್ತದೆ. ಇದರಲ್ಲಿ ವಿಟಮಿನ್‌ ಕೂಡ ಸಮೃದ್ಧವಾಗಿರುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅಲ್ಲದೇ ಹೈಡ್ರೇಟ್‌ ಆಗಿರುವಂತೆ ನೋಡಿಕೊಳ್ಳುತ್ತದೆ. 

ತೂಕ ಇಳಿಕೆಗೆ ಹೇಳಿ ಮಾಡಿಸಿದ ಹಣ್ಣು ಕಿತ್ತಳೆ. ಇದರಲ್ಲಿ ವಿಟಮಿನ್‌ ಸಿ ಅಂಶ ಹೇರಳವಾಗಿರುತ್ತದೆ. ಇದು ಕೂಡ ಚಯಾಪಚಯನ್ನು ವೃದ್ಧಿಸಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. 

ಕಿತ್ತಳೆ ಹಣ್ಣಿನಂತೆ ದ್ರಾಕ್ಷಿ ಹಣ್ಣಿನಲ್ಲೂ ನಾರಿನಾಂಶ, ವಿಟಮಿನ್‌ ಎ ಹಾಗೂ ವಿಟಮಿನ್‌ ಸಿ ತುಂಬಿರುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಆ ಮೂಲಕ ತೂಕ ಇಳಿಕೆಗೆ ನೆರವಾಗುತ್ತದೆ. 

ಕಿವಿ ಹಣ್ಣು ನಾರಿನಾಂಶ, ಫೊಲೇಟ್‌, ವಿಟಮಿನ್‌ ಸಿ ಹಾಗೂ ಇಯ ಅತ್ಯುತ್ತಮ ಮೂಲವಾಗಿದೆ. ಇದು ಹೊಟ್ಟೆಯ ಭಾಗದ ಕೊಬ್ಬು ಕರಗಿಸಲು ನೆರವಾಗುತ್ತದೆ. ತೂಕ ಇಳಿಕೆಗೂ ಇದು ಬೆಸ್ಟ್‌. 

ಪೀಚ್‌ ಹಣ್ಣಿನಲ್ಲಿ ಗ್ಲೈಸೆಮಿಕ್‌ ಇಂಡೆಕ್ಸ್‌ ಕಡಿಮೆ ಇದೆ. ಇದು ಕ್ಯಾಲೊರಿ, ವಿಟಮಿನ್‌ ಎ ಮತ್ತು ಸಿಯಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಾಗಾಗಿ ತೂಕ ನಷ್ಟಕ್ಕೂ ನೆರವಾಗುತ್ತದೆ. 

ಫ್ಯಾಷನ್‌ ಹಣ್ಣು ಅಧಿಕ ನಾರಿನಾಂಶ ಇರುವ ಕಡಿಮೆ ಕ್ಯಾಲೊರಿ ಇರುವ ಹಣ್ಣು. ಇದು ಹಸಿವನ್ನು ಕಡಿಮೆ ಮಾಡಿ, ತೂಕ ಇಳಿಕೆಗೆ ನೆರವಾಗುತ್ತದೆ. 

ಪೀಯರ್ಸ್‌ನಲ್ಲಿ ನಾರಿನಾಂಶ ಹಾಗೂ ಆಂಟಿಆಕ್ಸಿಡೆಂಟ್‌ ಅಂಶ ಸಮೃದ್ಧವಾಗಿದ್ದು ಇದು ಸಾಕಷ್ಟು ಹೊತ್ತು ಹೊಟ್ಟೆ ಹಸಿಯದಂತೆ ನೋಡಿಕೊಳ್ಳುತ್ತದೆ. ಇದು ಕ್ಯಾಲೊರಿಗಳನ್ನು ಕಡಿಮೆ ಮಾಡಲು ಹಾಗೂ ತೂಕ ಇಳಿಸಲು ಬೆಸ್ಟ್‌. 

ವಿಶ್ವದ ಅತ್ಯಂತ ಹಳೆಯ ನಗರಗಳು

ಇಂದಿಗೂ ಜನವಸತಿ ಇರುವ 5 ಪ್ರಾಚೀನ ನಗರಗಳಿವು

UNSPLASH, HOW STUFF WORKS