ಜಿಮ್‌ನಲ್ಲಿ ಬೆವರಿಳಿಸದೇ ತೂಕ ಇಳಿಯಲು ಏಲಕ್ಕಿ ನೀರಿಗಿಂತ ಉತ್ತಮ ಇನ್ನೊಂದಿಲ್ಲ
Pexels
By Reshma Aug 17, 2024
Hindustan Times Kannada
ತೂಕ ಇಳಿಸೋಕೆ ಎಲ್ಲರಿಗೂ ಇಷ್ಟ, ಹಾಗಂತ ಜಿಮ್‌ನಲ್ಲಿ ಬೆವರಿಸೋದು ಸುಲಭವಲ್ಲ. ಜಿಮ್‌ಗೆ ಹೋಗದೇ ತೂಕ ಇಳಿಯಲು ಏಲಕ್ಕಿ ನೀರಿಗಿಂತ ಉತ್ತಮ ಇನ್ನೊಂದಿಲ್ಲ
Pexels
ಬೆವರು ಸುರಿಸದೆ ಕೊಬ್ಬು ಕಡಿಮೆ ಮಾಡಿಕೊಳ್ಳಲು ಏಲಕ್ಕಿ ಪರಿಪೂರ್ಣ ಅಸ್ತ್ರ. ಏಲಕ್ಕಿ ಬೀಜಗಳಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು, ಹೇಗೆ ಅಂತ ನೋಡಿ
Pexels
ಏಲಕ್ಕಿಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆಯುರ್ವೇದದ ಪ್ರಕಾರ ಏಲಕ್ಕಿ ತ್ರಿತೋಷಿಕ. ಇದು ಜೀರ್ಣಕ್ರಿಯೆ, ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆಯ ಸಮಸ್ಯೆಗಳಿಂದ ರಕ್ಷಿಸುತ್ತದೆ. ಅಲ್ಲದೆ, ಇದು ಉಸಿರಿನ ದುರ್ವಾಸನೆ ನಿವಾರಿಸಲು ಇದು ಉತ್ತಮ. ಬಾಯಿ ರುಚಿ ಕೆಟ್ಟಿದ್ದರೆ ಇದರ ಸೇವನೆ ಉತ್ತಮ
Pexels
ಏಲಕ್ಕಿ ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ, ಅದು ಹೇಗೆ ನೋಡಿ
pixa bay
ತೂಕವನ್ನು ಕಳೆದುಕೊಳ್ಳುವ ಸುಲಭವಾದ ಮಾರ್ಗವೆಂದರೆ ಏಲಕ್ಕಿ ನೀರು. ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಏಲಕ್ಕಿ ನೀರನ್ನು ಕುಡಿಯಬಹುದು. ಹಲವರಿಗೆ ರಾತ್ರಿ ಮಲಗುವ ಮುನ್ನ ಏಲಕ್ಕಿ ತಿನ್ನುವ ಅಭ್ಯಾಸವಿರುತ್ತದೆ
pixa bay
ಆದಾಗ್ಯೂ, ತಜ್ಞರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಇದು ಕುಡಿದ ನಂತರ 60 ನಿಮಿಷಗಳ ಕಾಲ ಬೇರೆ ಏನನ್ನೂ ತಿನ್ನಬಾರದು.
pixa bay
ಮೊದಲು ಏಲಕ್ಕಿಯನ್ನು ಪುಡಿಮಾಡಿ ನಂತರ ಏಲಕ್ಕಿ ಬೀಜಗಳನ್ನು ಹಾಕಿ ಮತ್ತು ಸಿಪ್ಪೆಯನ್ನು ಒಂದು ಲೋಟ ನೀರಿನಲ್ಲಿ ಹಾಕಿ. ನಂತರ ನೀರನ್ನು ಕುದಿಸಿ. ರಾತ್ರಿಯಿಡೀ ಹೀಗೆ ಬಿಡಿ. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಿರಿ.
pixa bay
ಒಂದು ಪಾತ್ರೆಯಲ್ಲಿ 2 ಗ್ಲಾಸ್ ನೀರನ್ನು ಕುದಿಸಿ. ನಂತರ ಏಲಕ್ಕಿಯನ್ನು ಒಡೆದು ಹಾಕಿ. ನಂತರ ಏಲಕ್ಕಿಯನ್ನು ನೀರಿನಿಂದ ತೆಗೆಯಿರಿ. ರಾತ್ರಿ ಮಲಗುವ ಮುನ್ನ ಉಳಿದ ನೀರನ್ನು ಕುಡಿಯಿರಿ.
pixa bay
ಈ ಹೇಳಿಕೆಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ವಿವರಗಳಿಗಾಗಿ ವೈದ್ಯರನ್ನು ಸಂಪರ್ಕಿಸಿ.