ಕ್ರೀಡಾಪಟುವಾದ್ರೆ ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ
By Prasanna Kumar P N
Jan 09, 2025
Hindustan Times
Kannada
ಕ್ರೀಡಾಪಟು ಆಗುವುದರಿಂದ ಹಲವಾರು ಪ್ರಯೋಜನಗಳಿವೆ. ಅವುಗಳ ಲಾಭ ಹೇಗೆಲ್ಲಾ ಇದೆ ಎನ್ನುವುದರ ಸರಳ ವಿವರ ಇಲ್ಲಿದೆ.
ಕ್ರೀಡಾಪಟುವಿಗೆ ಫಿಸಿಕಲ್ ಫಿಟ್ನೆಸ್ ಅಗತ್ಯ. ಇದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುತ್ತದೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ ತಂಡಗಳಿಗೆ ಆಡುವ ಅವಕಾಶ ಸಿಗಲಿದೆ. ನಿಮ್ಮ ಜೀವನ ಚಿತ್ರಣವನ್ನು ಬದಲಿಸಬಹುದು.
ಕ್ರೀಡೆಯಲ್ಲಿ ಯಶಸ್ಸು ಸಾಧಿಸಿದರೆ, ಜಾಹೀರಾತು ಸೇರಿದಂತೆ ವಿವಿಧ ಮೂಲಗಳಿಂದ ಹಣ ಗಳಿಸಬಹುದು. ಅತ್ಯುತ್ತಮ ಪ್ರಶಸ್ತಿ-ಪುರಸ್ಕಾರ ಪಡೆಯಬಹುದು.
ನೀವು ಆಯ್ಕೆ ಮಾಡುವ ಕ್ರೀಡೆಗೆ ಕೋಚ್ ಆಗಬಹುದು, ವೀಕ್ಷಕ ವಿವರಣೆ ಸೇರಿದಂತೆ ಕ್ರೀಡಾ ಆಡಳಿತದಂತಹ ವಿವಿಧ ಉದ್ಯೋಗ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ.
ಟೀಮ್ ವರ್ಕ್, ನಾಯಕತ್ವದ ಗುಣಗಳು, ಸಂವಹನ, ಸೌಹಾರ್ದತೆಯಂತಹ ಅಮೂಲ್ಯ ಕೌಶಲಗಳನ್ನು ಕಲಿಸುತ್ತದೆ.
ಕ್ರೀಡಾಪಟುವಿಗೆ ಶಿಸ್ತು ಮತ್ತು ಸಮಯ ನಿರ್ವಹಣೆ ಅಗತ್ಯವಾಗಿದೆ. ಇದು ಜೀವನಕ್ಕೂ ಬೇಕಾದ ಕೌಶಲ್ಯಗಳು.
ಕ್ರೀಡೆಯಲ್ಲಿ ಯಶಸ್ಸು ಸಾಧಿಸಿದರೆ ಮನ್ನಣೆ ಮತ್ತು ಖ್ಯಾತಿಯನ್ನು ಗಳಿಸಬಹುದು. ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಯುತ್ತದೆ.
ದೇಶವನ್ನು ಪ್ರತಿನಿಧಿಸುವುದು ಅಥವಾ ಅಂತಾರಾಷ್ಟ್ರೀಯ ಲೀಗ್‌ಗಳಲ್ಲಿ ಆಡುವುದರಿಂದ ಪ್ರಯಾಣ, ಸಾಂಸ್ಕೃತಿಕ ವಿನಿಮಯ ಮತ್ತು ವೈಯಕ್ತಿಕ ಬೆಳವಣಿಗೆಗೆ ಅವಕಾಶ ಸಿಗುತ್ತದೆ
Images: Virat Kohli and cristiano ronaldo instagram
ಬಾಲಿವುಡ್ ನಟಿ ರವೀನಾ ಟಂಡನ್ ಮಸ್ತ್ ಮಸ್ತ್ ಫೋಟೋಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ