ಯಾವುದೇ ಮಂತ್ರವನ್ನು 108 ಬಾರಿ ಪಠಿಸುವುದೇಕೆ?

By Prasanna Kumar P N
Aug 14, 2024

Hindustan Times
Kannada

ಹಿಂದೂ ಧರ್ಮದಲ್ಲಿ 108 ಸಂಖ್ಯೆಗೆ ತುಂಬಾ ಮಹತ್ವ ಇದ್ದು, ಯಾವುದೇ ಮಂತ್ರವನ್ನು 108 ಬಾರಿ ಪಠಿಸಲಾಗುತ್ತದೆ. ಆದರೆ ಇಷ್ಟೇ ಬಾರಿ ಪಠಿಸುವುದೇಕೆ? ಇಲ್ಲಿದೆ ವಿವರ.

ಹಿಂದೂ ಪುರಾಣದಲ್ಲಿ 108 ಅನ್ನು ಸಂಪೂರ್ಣತೆಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದು ಹುಟ್ಟಿನಿಂದ ಸಾವಿನವರೆಗೂ ವ್ಯಕ್ತಿಯ ಜೀವನವನ್ನು ಒಳಗೊಂಡಿರುತ್ತದೆ.

ಶಾಸ್ತ್ರಗಳಲ್ಲಿ ಸ್ತೋತ್ರಗಳು, ಪದ್ಯಗಳನ್ನು 108ರಂತೆ ಬರೆಯಲಾಗಿದೆ. ಹಾಗೆಯೇ 108 ಶಿವಲಿಂಗಗಳಿವೆ. ರುದ್ರಾಕ್ಷದಲ್ಲಿ 108 ಮಣಿಗಳಿವೆ.

ಆದಿಶೇಷನು ಕ್ಷೀರಸಾಗರ ದಾಟಿದ ವೇಳೆ ಎರಡೂ ಬದಿಯಲ್ಲಿ 108 ಜನರು ಇದ್ದರು. ಇದರಲ್ಲಿ 54 ದೇವತೆಗಳು ಮತ್ತು 54 ಅಸುರರು.

ಆಯುರ್ವೇದದ ಪ್ರಕಾರ ನಮ್ಮ ದೇಹದಲ್ಲಿ 108 ರಹಸ್ಯ ಸ್ಥಾನಗಳಿವೆ. 

ವೈಷ್ಣವ ಪುರಾಣದ ಪ್ರಕಾರ ದೇಶದಲ್ಲಿ 108 ಪ್ರಮುಖ ವಿಷ್ಣು ದೇವಾಯಲಗಳಿವೆ.

ದೇವಾಲಯಕ್ಕೆ 108 ಪ್ರದಕ್ಷಿಣೆಗಳನ್ನು ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಹನುಮಾನ್ ಚಾಲೀಸಾವನ್ನು 108 ಬಾರಿ ಪಠಿಸಿದರೆ ಜೀವನದಲ್ಲಿ ಭಯವೇ ಇರುವುದಿಲ್ಲ.

ಹೀಗೆ ಎಲ್ಲವೂ 108ರೊಂದಿಗೆ ಸಂಪರ್ಕ ಹೊಂದಿರುವ ಕಾರಣಕ್ಕೆ ದೇವರಿಗೆ ಸಂಬಂಧಿಸಿದ ಮಂತ್ರಗಳು 108 ಇರುತ್ತವೆ.

ಕರ್ನಾಟಕದಲ್ಲಿ ಸೆಪ್ಟಂಬರ್‌  ಮಳೆ ಹೇಗಿದೆ