ಜಾತಕದಲ್ಲಿ ಸೂರ್ಯನ ಸ್ಥಾನ ದುರ್ಬಲವಾಗಿದ್ದರೆ ವ್ಯಕ್ತಿಯು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ಸೂರ್ಯ ದುರ್ಬಲವಾಗಿದ್ದರೆ ಜಾತಕದಲ್ಲಿ ತಂದೆಯೊಂದಿಗೆ ಮನಸ್ತಾಪ, ಕೆಲಸ ಕಳೆದುಕೊಳ್ಳುವುದು, ಚಿನ್ನ ಕಳೆದುಕೊಳ್ಳುವುದು ಸೇರಿದಂತೆ ಇನ್ನಿತರ ಸಮಸ್ಯೆಗಳಾಗುತ್ತದೆ
ಆದರೆ ಕುಂಡಲಿಯಲ್ಲಿ ಸೂರ್ಯ ಬಲವಾಗಿದ್ದರೆ ಗೌರವ, ಕುಟುಂಬದ ಸದಸ್ಯರೊಂದಿಗೆ ಒಗಟ್ಟು, ಮನೆಯಲ್ಲಿ ಖುಷಿ ಇರುತ್ತದೆ
ಜಾತಕದಲ್ಲಿ ಸೂರ್ಯನ ಸ್ಥಾನ ಬಲಪಡಿಸಲು ಕೆಲವೊಂದು ಪರಿಹಾರಗಳು ಹೀಗಿವೆ
ಮನೆ ಸದಾ ಶುಚಿಯಾಗಿರಬೇಕು, ಅದರಲ್ಲೂ ಪೂರ್ವ ದಿಕ್ಕಿನಲ್ಲಿ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಬೇಕು
ವಿಷ್ಣುವನ್ನು ಆರಾಧಿಸುವುದು, ಹೆತ್ತವರನ್ನು ಗೌರವಿಸಿದರೆ ಜಾತಕದಲ್ಲಿ ಸೂರ್ಯನು ಬಲಗೊಳ್ಳುತ್ತಾನೆ
12 ಭಾನುವಾರ ಉಪವಾಸ ಮಾಡಿ ಸೂರ್ಯನನ್ನು ಪೂಜಿಸಿದರೆ ನಿಮಗೆ ಅವನ ಆಶೀರ್ವಾದ ದೊರೆಯುತ್ತದೆ
ಭಾನುವಾರ ಕೆಂಪು ವಸ್ತ್ರ ಧರಿಸಿ ಮತ್ತು 3, 5 ಅಥವಾ 12 ಸುತ್ತುಗಳ ವರೆಗೆ 'ಓಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ' ಎಂಬ ಮಂತ್ರವನ್ನು ಪಠಿಸಿ
ಕೆಂಪು ಮತ್ತು ಹಳದಿ ಬಣ್ಣದ ಬಟ್ಟೆಗಳು, ಬೆಲ್ಲ, ತಾಮ್ರ, ಗೋಧಿಯನ್ನು ದಾನ ಮಾಡಿ
ತಾಮ್ರದ ಪಾತ್ರೆಯಲ್ಲಿ ಗಂಗಾಜಲ, ಕೆಂಪು ಚಂದನ, ಕೆಂಪು ಹೂವುಗಳು, ಅಕ್ಷತೆಯನ್ನು ಬೆರೆಸಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ