ಭಾರತದಲ್ಲಿ ಗಾಂಧಿ ನೋಟು ಯಾವಾಗ ಚಲಾವಣೆಗೆ ಬಂತು
By Umesh Kumar S
Jul 08, 2024
Hindustan Times
Kannada
ಮಹಾತ್ಮ ಗಾಂಧಿಯವರ ಮುಗುಳುನಗು ಭಾರತೀಯ ಕರೆನ್ಸಿ ನೋಟುಗಳ ಅಸ್ಮಿತೆ. ಇದಕ್ಕೂ ಮೊದಲು ಅಶೋಕ ಸ್ತಂಭ ಇತ್ತು ನೋಟುಗಳಲ್ಲಿ.
ಕಾಲಾನುಕ್ರಮದಲ್ಲಿ ಭಾರತೀಯ ನೋಟುಗಳ ಬಣ್ಣ ಮತ್ತು ರೂಪ ಕೂಡ ಬದಲಾಯಿತು. ಈ ಗಾಂಧಿ ನೋಟು ಯಾವಾಗ ಬಂತು
ಸ್ವತಂತ್ರ ಭಾರತದಲ್ಲಿ ಆರಂಭದ ಎರಡು ವರ್ಷ ಬ್ರಿಟನ್‌ನ 6ನೇ ರಾಜಾ ಜಾರ್ಜ್ ಚಿತ್ರ ನೋಟುಗಳು ಚಲಾವಣೆಯಲ್ಲಿದ್ದವು.
1949ರಲ್ಲಿ ಭಾರತದ ನೋಟುಗಳಲ್ಲಿ ಅಶೋಕ ಸ್ತಂಭದ ಚಿತ್ರ ಬಂತು. ಬ್ರಿಟನ್ ರಾಜನ ಚಿತ್ರ ಮರೆಯಾಯಿತು.
ಮಹಾತ್ಮ ಗಾಂಧಿಯವರ 100 ಜಯಂತಿ ನಿಮಿತ್ತ 1969ರಲ್ಲಿ ಮೊದಲ ಬಾರಿ ಗಾಂಧಿ ನೋಟು ಚಲಾವಣೆಗೆ ಬಂತು
1987ರಲ್ಲಿ ಎರಡನೇ ಬಾರಿ 500 ರೂಪಾಯಿ ನೋಟುಗಳಲ್ಲಿ ಗಾಂಧಿ ಚಿತ್ರ ಮುದ್ರಿತವಾಯಿತು.
1995ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟುಗಳಲ್ಲಿ ಸ್ಥಾಯೀ ಸ್ವರೂಪದಲ್ಲಿ ಗಾಂಧಿ ಚಿತ್ರ ಮುದ್ರಿಸುವ ಪ್ರಸ್ತಾವನೆ ಮುಂದಿಟ್ಟಿತು.
1996ರಲ್ಲಿ ಕೇಂದ್ರ ಸರ್ಕಾರ ಆರ್‌ಬಿಐ ಪ್ರಸ್ತಾವನೆಯನ್ನು ಅಂಗೀಕರಿಸಿತು. ಅಶೋಕ ಸ್ತಂಭದ ಜಾಗದಲ್ಲಿ ಗಾಂಧಿ ಚಿತ್ರ ಬಂತು.
ನೋಟುಗಳಲ್ಲಿ ಮಹಾತ್ಮ ಗಾಂಧಿ ಅವರ ಫೋಟೋ ಕಟೌಟ್ ಹೊಸ ನೋಟುಗಳಲ್ಲಿ ಮುದ್ರಣ ಕಂಡಿತು.
ಹೊಸ ನೋಟುಗಳಲ್ಲಿ ಮಹಾತ್ಮ ಗಾಂಧಿ ಮುಗುಳುನಗುವ ಚಿತ್ರ ಮುದ್ರಿತವಾಯಿತು.
Pixel
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ