ರಾಶಿಚಕ್ರದ ಆಧಾರದ ಮೇಲೆ ವಾಹನದ ಬಣ್ಣ ಆರಿಸಿಕೊಳ್ಳಿ

By Rakshitha Sowmya
Apr 25, 2024

Hindustan Times
Kannada

ಕೆಂಪು ಮೇಷ ರಾಶಿಯು ಬೆಂಕಿಯಿಂದ ಆಳಲ್ಪಡುತ್ತದೆ. ಇದು ಉತ್ಸಾಹ ಹಾಗೂ ಶಕ್ತಿಯ ಸಂಕೇತವಾಗಿರುವುದರಿಂದ ಈ ರಾಶಿಯವರಿಗೆ ಕೆಂಪು ಬಣ್ಣ ಸೂಕ್ತ

ಹಸಿರು  ವೃಷಭ ವಿಶ್ವಾಸಾರ್ಹ ಹಾಗೂ ಪ್ರಕೃತಿಯನ್ನು ಸಂಕೇತಿಸುತ್ತದೆ. ಆದ್ದರಿಂದ ಈ ರಾಶಿಯವರಿಗೆ ಹಸಿರು ಬಣ್ಣದ ವಾಹನ ಶುಭ

ಹಳದಿ ಅವಳಿಗಳ ಚಿಹ್ನೆಯಾದ ಮಿಥುನ ರಾಶಿ ಬಹುಮುಖತೆ ಮತ್ತು ಸಂವಹನ ರಾಶಿಗೆ ಹೆಸರುವಾಸಿಯಾಗಿದೆ. ಹಳದಿ ಬಣ್ಣದ ವಾಹನ ನಿಮಗೆ ಒಳ್ಳೆಯದು

ಬೆಳ್ಳಿ  ನೀರಿನ ಚಿಹ್ನೆಯಾದ ಕರ್ಕಾಟಕ ರಾಶಿಯು ಸೂಷ್ಮತೆ ಮತ್ತು ಅಂತ:ಪ್ರಜ್ಞೆಗೆ ಹೆಸರುವಾಸಿಯಾಗಿದೆ. ಬೆಳ್ಳಿ ಬಣ್ಣದ ಕಾರು ಅಥವಾ ಸ್ಕೂಟರ್‌ ಕೊಂಡರೆ ನಿಮಗೆ ಸರಿ ಹೊಂದುತ್ತದೆ

ಚಿನ್ನ ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯು ಉದಾರತೆ, ನಾಯಕತ್ವದ ಗುಣಗಳಿಗೆ ಹೆಸರುವಾಸಿಯಾಗಿದೆ. ಈ ರಾಶಿಯವರಿಗೆ ಚಿನ್ನದ ಬಣ್ಣದ ವಾಹನ ಶುಭ 

ಬಿಳಿ ಕನ್ಯಾ, ಭೂಮಿಯ ಚಿಹ್ನೆ. ಪ್ರಾಯೋಗಿಕತೆ, ಗಮನ, ಶುದ್ಧತೆಗೆ ಹೆಸರುವಾಸಿಯಾಗಿದೆ, ಇವರಿಗೆ ಬಿಳಿ ಬಣ್ಣದ ಕಾರು ಸರಿ ಹೊಂದುತ್ತದೆ

ನೀಲಿ ತುಲಾ ರಾಶಿಯು ವಾಯು ಚಿಹ್ನೆ. ರಾಜತಾಂತ್ರಿಕತೆ ಹಾಗೂ ಸಮತೋಲನದ ಅರ್ಥಕ್ಕೆ ಹೆಸರುವಾಸಿಯಾಗಿದೆ. ನೀಲಿಯು ಸಾಮರಸ್ಯದ ಬಣ್ಣ ಆದ್ದರಿಂದ ಈ ರಾಶಿಯವರಿಗೆ ನೀಲಿ ಬಣ್ಣ ಸೂಕ್ತ

ಕಪ್ಪು ನೀರಿನ ಚಿಹ್ನೆ ವೃಶ್ಚಿಕ ಉತ್ಸಾಹ, ನಿಗೂಢತೆಗೆ ಹೆಸರುವಾಸಿಯಾಗಿದೆ. ಶಕ್ತಿ, ಸೊಬಗಿಗೆ ಹೆಸರಾಗಿರುವ ಕಪ್ಪು ಬಣ್ಣದ ವಾಹನ ನಿಮಗೆ ಹೊಂದುತ್ತದೆ. 

ನೇರಳೆ ಧನು ರಾಶಿ ಬೆಂಕಿಯ ಚಿಹ್ನೆ. ಆಶಾವಾದ, ಸಾಹಸ, ಸ್ವಾತಂತ್ಯ್ರ ಪ್ರೀತಿಗೆ ಹೆಸರುವಾಸಿಯಾಗಿದೆ. ಸೃಜನಶೀಲತೆ, ಆಧ್ಯಾತ್ಮಿಕತೆಗೆ ಹೆಸರುವಾಸಿಯಾಗಿರುವ ಧನು ರಾಶಿಯವರಿಗೆ ನೇರಳೆಯು ಅದೃಷ್ಟದ ಬಣ್ಣವಾಗಿದೆ. 

ಕಂದು  ಮಕರವು ಭೂಮಿಯ ಚಿಹ್ನೆ. ಮಹತ್ವಾಕಾಂಕ್ಷೆ, ಶಿಸ್ತು, ಪ್ರಾಯೋಗಿಕತೆಗೆ ಹೆಸರುವಾಸಿಯಾಗಿದೆ. ಸ್ಥಿರತೆ ಮತ್ತು ವಿಶ್ವಾಸಾರ್ಹತೆಯ ಬಣ್ಣ ಕಂದು ಇವರಿಗೆ ಶುಭ

ಆಕ್ವಾ ಕುಂಭವು ವಾಯು ಚಿಹ್ನೆಯಾಗಿದೆ. ಸ್ವಾತಂತ್ರ್ಯ, ಸ್ವಂತಿಕೆ, ಮಾನವೀಯ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ. ನಾವೀನ್ಯತೆ, ಪ್ರಗತಿಯ ಬಣ್ಣವಾದ ಆಕ್ವಾ ಬಣ್ಣದ ವಾಹನ ಇವರಿಗೆ ಹೊಂದುತ್ತದೆ

ಬಿಳಿ ಸಹಾನುಭೂಮಿ, ಕಲ್ಪನೆ, ಸೂಷ್ಮತೆಗೆ ಹೆಸರುವಾಸಿಯಾಗಿರುವ ಮೀನರಾಶಿಯವರಿಗೆ ಬಿಳಿ ಬಣ್ಣ ಬಹಳ ಹೊಂದುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಪಿಕೆಎಲ್​ 12 ತಂಡಗಳ ಮಾಲೀಕರು ಯಾರು?