ಹಿಂದೂ ಸಂಪ್ರದಾಯದಲ್ಲಿ ಬೆಳಗ್ಗೆ , ಸಂಜೆ ಎರಡೂ ಸಮಯದಲ್ಲಿ ದೀಪ ಬೆಳಗಿಸುವ ಸಂಪ್ರದಾಯವಿದೆ
ಮನೆಯಲ್ಲಿ ದೀಪ ಬೆಳಗುವುದರಿಂದ ನಕಾರಾತ್ಮಕ ಶಕ್ತಿಗಳು ದೂರಾಗುತ್ತವೆ. ಆದಕ್ಕೆ ನಿಗದಿತ ಸಮಯವಿದೆ
ಬೆಳಗ್ಗೆ ಹಾಗೂ ಸಂಜೆ ದೀಪ ಹಚ್ಚಲು ಸೂಕ್ತ ಸಮಯ ಯಾವುದು? ಮುಂದೆ ಓದಿ
ಸೂರ್ಯೋದಯದ ಸಮಯದಲ್ಲಿ ದೀಪ ಬೆಳಗಿಸುವುದು ಮಂಗಳಕರವಾಗಿದೆ, ದೇವಸ್ಥಾನಗಳಲ್ಲಿ ಕೂಡಾ ಇದೇ ಸಮಯದಲ್ಲಿ ದೀಪ ಹಚ್ಚಲಾಗುತ್ತದೆ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬೆಳಗ್ಗೆ 5 ರಿಂದ 10 ವರೆಗೆ ದೇವರ ಕೋಣೆಯಲ್ಲಿ ದೀಪ ಹಚ್ಚಬಹುದು
ಸಂಜೆ ಸಮಯದ ಬಗ್ಗೆ ಹೇಳುವುದಾದರೆ ಸೂರ್ಯಾಸ್ತದ ನಂತರ ಪ್ರದೋಷದ ಸಮಯದಲ್ಲಿ ದೀಪ ಬೆಳಗಿಸುವುದು ಶುಭ
ಸಾಯಂಕಾಲ 5 ರಿಂದ 7 ವರೆಗೆ ದೇವರಕೋಣೆಯಲ್ಲಿ ದೀಪ ಹಚ್ಚಿದರೆ ಒಳ್ಳೆಯದು
ದೇವಸ್ಥಾನದಲ್ಲಿ ರಾತ್ರಿ 8.30ಕ್ಕೆ ಶಯನ ಆರತಿ ಮಾಡಲಾಗುತ್ತದೆ, ಈ ಸಮಯದ ನಂತರ ಮನೆಯಲ್ಲಿ ದೀಪ ಹಚ್ಚಬಾರದು
ದೇವರಿಗೆ ಹಚ್ಚುವ ದೀಪಕ್ಕೆ ಹತ್ತಿಯ ಬತ್ತಿಯನ್ನು ಬಳಸಿದರೆ ಉತ್ತಮ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ