ಅಂತರಿಕ್ಷದ ಅದ್ಭುತಗಳು: ಯಾವ ಗ್ರಹವು ಹೆಚ್ಚು ಚಂದ್ರರನ್ನು ಹೊಂದಿದೆ?
Photo Credit: Pinterest
By Praveen Chandra B
Jan 02, 2025
Hindustan Times
Kannada
ಅತಿ ಹೆಚ್ಚು ಚಂದ್ರರನ್ನು ಹೊಂದಿರುವ ಗ್ರಹ ಯಾವುದು? ಬನ್ನಿ ಅಂತರಿಕ್ಷವೆಂಬ ಸುಂದರ ಜಗತ್ತಿನ ಕೌತುಕಗಳನ್ನ ತಿಳಿಯೋಣ.
Photo Credit: NASA
ಕೆಲವು ಗ್ರಹಗಳು ಹಲವು ಚಂದ್ರರನ್ನು ಹೊಂದಿವೆ. ಕೆಲವು ಗ್ರಹಗಳಲ್ಲಿ ಒಂದು ಅಥವಾ ಬೆರಳೆಣಿಕೆಯ ಮೂನ್‌ಗಳಿವೆ. ಕೆಲವು ಗ್ರಹಗಳು ಯಾವುದೇ ಉಪಗ್ರಹಗಳನ್ನು ಹೊಂದಿಲ್ಲ.
Photo Credit: NASA
ಶುಕ್ರ ಮತ್ತು ಬುಧ ಗ್ರಹಗಳಿಗೆ ಚಂದ್ರರಿಲ್ಲ. ಇವು ಸೌರವ್ಯೂಹದಲ್ಲಿ ಚಂದ್ರನಿಲ್ಲದ ಗ್ರಹಗಳಾಗಿವೆ.
Photo Credit: NASA
ಗುರು ಮತ್ತು ಶನಿಯಂತಹ ಅನಿಲ ದೈತ್ಯ ಗ್ರಹಗಳು ಹೆಚ್ಚು ಮೂನ್‌ಗಳನ್ನು ಹೊಂದಿವೆ.
Photo Credit: NASA
ಗುರುಗ್ರಹದಲ್ಲಿ ಈಗಾಗಲೇ 95 ಮೂನ್‌ಗಳನ್ನು ಗುರುತಿಸಲಾಗಿದೆ.
Photo Credit: NASA
ಶನಿಯು ಗುರುಗ್ರಹವನ್ನು ಮೀರಿಸಿದ್ದು, ಇದುವರೆಗೆ 146 ಉಪಗ್ರಹಗಳನ್ನು ಗುರುತಿಸಲಾಗಿದೆ.
Photo Credit: NASA
ಶನಿಯು ನಮ್ಮ ಸೌರವ್ಯೂಹದಲ್ಲಿ ಅತಿ ಹೆಚ್ಚು ಚಂದ್ರರನ್ನು ಹೊಂದಿರುವ ಗ್ರಹವಾಗಿದೆ.
Photo Credit: NASA
ಶನಿಯ ಅಗಾಧ ಗಾತ್ರ ಮತ್ತು ಗುರುತ್ವಾಕರ್ಷಣೆಯ ಸೆಳೆತವು ಅನೇಕ ಮೂನ್‌ಗಳನ್ನು ಸೆಳೆದುಕೊಳ್ಳಲು ಕಾರಣವಾಗಿದೆ.
Photo Credit: NASA
ಹೀಗಾಗಿ ಸೌರವ್ಯೂಹದ ಇತರೆ ಯಾವುದೇ ಗ್ರಹಗಳಿಗಿಂತ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಶನಿಯನ್ನು ಚಂದ್ರರ ರಾಜ ಎಂದು ಕರೆಯಲು ಅಡ್ಡಿಯಿಲ್ಲ.
Photo Credit: NASA
ಅಂಡಾಶಯದ ಆರೋಗ್ಯ ಸುಧಾರಿಸುವ ಆಹಾರಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ