ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಜಯಗಳಿಸಿದ್ದಾರೆ.
By Suma Gaonkar Nov 23, 2024
Hindustan Times Kannada
ಅನ್ನಪೂರ್ಣ ಅವರು ಬಳ್ಳಾರಿ ಸಂಸದ ಇ ತುಕಾರಾಂ ಅವರ ಪತ್ನಿ. ಅವರ ಎದುರಾಳಿಯಾಗಿ ಬಿಜೆಪಿಯಿಂದ ಬಂಗಾರು ಹನುಮಂತು ಸ್ಪರ್ಧಿಸಿದ್ದರು.
ಗೆಲುವು ನಿಚ್ಚಳವಾದ ತಕ್ಷಣ ಅನ್ನಪೂರ್ಣ ತುಕಾರಾಂ ಅವರು ಸಂಡೂರಿನ ಕನಕ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಅನ್ನಪೂರ್ಣ ಅವರು 2023-24 ರಲ್ಲಿ ತಮ್ಮ ಒಟ್ಟು ಆದಾಯ 6.19 ಲಕ್ಷ ಎಂದು ಘೋಷಿಸಿಕೊಂಡಿದ್ದಾರೆ.
ತಮ್ಮ ಒಟ್ಟು ಆಸ್ತಿ ಮೌಲ್ಯ 56.69 ಲಕ್ಷ, ತಮ್ಮ ಪತಿಯ ಆಸ್ತಿ ಮೌಲ್ಯವು 1.48 ಕೋಟಿ ಎಂದು ಅನ್ನಪೂರ್ಣ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಪತಿಯಿಂದ 92 ಲಕ್ಷ ಸಾಲ ಪಡೆದಿದ್ದೇನೆ ಎಂದಿರುವ ಅನ್ನಪೂರ್ಣ ತಮ್ಮ ಮೇಲಿರುವ ಒಟ್ಟು ಸಾಲ 1.02 ಕೋಟಿ ಎಂದು ಹೇಳಿಕೊಂಡಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದಿಂದ 2014 ರಲ್ಲಿ ಬಿಎ ಪದವಿ ಪಡೆದಿದ್ದಾರೆ. ಇವರ ಚಿಕ್ಕಪ್ಪ ಪ್ರಾಧ್ಯಾಪಕರಾಗಿದ್ದವರು, ಚಿಕ್ಕಂದಿನಿಂದಲೇ ಅನ್ನಪೂರ್ಣ ಅವರಿಗೆ ಸಾಹಿತ್ಯದಲ್ಲಿ ಒಲವು
ಗಣಿಗಾರಿಕೆಯಿಂದ ಅಕ್ಷರಶಃ ನಲುಗಿತ್ತು ಸಂಡೂರು ತಾಲ್ಲೂಕು. ಇದೀಗ ಮತ್ತೆ ಗಣಿಗಾರಿಕೆಯ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅನ್ನಪೂರ್ಣ ಈ ಚುನಾವಣೆ ಮಹತ್ವ ಪಡೆದಿತ್ತು.
ಗೆದ್ದರೆ ಊರಿಗೊಂದು ಸುಸಜ್ಜಿತ ಆಸ್ಪತ್ರೆ ತರುವೆ, ಮಹಿಳೆಯರಿಗಾಗಿ ಕೌಶಲಾಭಿವೃದ್ಧಿ ಕೇಂದ್ರ ತೆರೆಯುವ, ನರ್ಸಿಂಗ್ ಕಾಲೇಜು ಆರಂಭಿಸುವೆ ಎಂದು ಅನ್ನಪೂರ್ಣ ಭರವಸೆ ಕೊಟ್ಟಿದ್ದರು
ಒಟ್ಟಾರೆ ಗಣಿಗಾರಿಕೆ ಕರಾಳ ಮುಖ ಕಂಡಿರುವ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಶಾಸಕಿಯಾಗಿದ್ದಾರೆ. ಈಗ ಮತ್ತೊಮ್ಮೆ ಗಣಿಗಾರಿಕೆಗೆ ಅವಕಾಶ ಮುಕ್ತವಾಗಿದೆ. ಅನ್ನಪೂರ್ಣ ಅವರ ನಿಲುವಿನ ಬಗ್ಗೆ ಕರ್ನಾಟಕದಲ್ಲಿ ನಿರೀಕ್ಷೆಗಳು ವ್ಯಕ್ತವಾಗಿವೆ.
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು