ದಕ್ಷಿಣ ಭಾರತದ ನಂಬರ್ 1 ಎಲೆಕ್ಟ್ರಿಕ್ ಸ್ಕೂಟರ್‌ ಯಾವುದು

By Umesh Kumar S
Jan 04, 2025

Hindustan Times
Kannada

ವಾಹನ್ ಪೋರ್ಟಲ್ ಪ್ರಕಾರ, ಅಥೆರ್ ದಕ್ಷಿಣ ಭಾರತದ ನಂಬರ್ 1 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್

ದಕ್ಷಿಣ ಭಾರತದಲ್ಲಿ ಡಿಸೆಂಬರ್‌ನಲ್ಲಿ ಮಾರಾಟವಾದ 4 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪೈಕಿ ಒಂದು ಅಥೆರ್

2024 ರಲ್ಲಿ, ಅಥೆರ್ ಎನರ್ಜಿ ದಕ್ಷಿಣ ಭಾರತದಲ್ಲಿ ಶೇ 25 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿತ್ತು

ಭಾರತದಲ್ಲಿ ಡಿಸೆಂಬರ್‌ನ ಇವಿ ದ್ವಿಚಕ್ರ ವಾಹನ ಮಾರಾಟದಲ್ಲಿ ಅಥೆರ್ ಎನರ್ಜಿ ಪಾಲು ಶೇ 14.2 

ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರದಲ್ಲಿ ಅಥೆರ್ ಪಾಲು ಟಿವಿಎಸ್‌ಗಿಂತ ಶೇ 5.5 ಮತ್ತು ಓಲಾ ಎಲೆಕ್ಟ್ರಿಕ್‌ಗಿಂತ ಶೇ 6.5 ಹೆಚ್ಚು

ಅಥೆರ್ ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ 450 ಸೀರಿಸ್ ಮತ್ತು ರಿಜ್ಟಾ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದೆ.

ಅಥೆರ್ 450 ಸೀರಿಸ್ ಉತ್ಸಾಹಿಗಳಿಗೆ ಹೇಳಿ ಮಾಡಿಸಿದಂತಹ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.

ಮತ್ತೊಂದೆಡೆ, ಅಥೆರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್‌ ಕುಟುಂಬಕ್ಕೆ ಹೇಳಿ ಮಾಡಿಸಿದ ಇವಿ ಎಂದೆನಿಸಿದೆ.

450 ಅಪೆಕ್ಸ್ ಕಾರ್ಯಕ್ಷಮತೆ ವರ್ಧನೆಯೊಂದಿಗೆ ಉತ್ಸಾಹಿಗಳ ಪ್ರಮುಖ ಸ್ಕೂಟರ್ ಆಗಿ ಗಮನಸೆಳೆದಿದೆ

ಆಥೆರ್‌ ದ್ವಿಚಕ್ರವಾಹನಗಳ ಜನಪ್ರಿಯತೆ ಅದರ ಗ್ರಾಹಕ ಸ್ನೇಹಿ ಅನುಭವಕ್ಕೆ ಸಾಕ್ಷಿ ಎಂದು ವರದಿ ವಿವರಿಸಿದೆ.

ಸಾರ್ವಕಾಲಿಕ ದಾಖಲೆ ಮುರಿದ ಪಾಕಿಸ್ತಾನ ನಾಯಕ ಶಾನ್ ಮಸೂದ್