ಪೈಲಟ್‌ಗಳು ಉದ್ದ ಗಡ್ಡ ಬಿಡುವಂತಿಲ್ಲ ಎಂಬ ನಿಯಮವಿದೆ. ಈ ಹಿಂದೆ ಈ ನಿಯಮವನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು. ಪೈಲಟ್‌ಗಳು ಕ್ಲೀನ್ ಶೇವ್ ಮಾಡಿರಬೇಕಿತ್ತು.
ಆದರೆ ಈಗ ಕೆಲವೊಂದು ವಿಮಾನಯಾನ ಸಂಸ್ಥೆಗಳು ವಿನಾಯಿತಿ ನೀಡಿವೆ, ಕೆಲವೊಂದರಲ್ಲಿ ಇಂದಿಗೂ ಅವಕಾಶವಿಲ್ಲ.
ಪೈಲಟ್‌ಗಳು ಉದ್ದ ಗಡ್ಡ ಬಿಡುವಂತಿಲ್ಲ ಎಂಬುದಕ್ಕೆ 2 ಕಾರಣವಿದೆ
ಪೈಲಟ್‌ಗಳು ಆಕ್ಸಿಜನ್ ಮಾಸ್ಕ್ ಹಾಕಿಕೊಂಡಾಗ ಮುಖದ ಮೇಲೆ ಕೂದಲು ಇದ್ದರೆ ಮಾಸ್ಕ್ ಸರಿಯಾಗಿ ಕೂರುವುದಿಲ್ಲ. ಇದು ಅಗತ್ಯ ಸಮಯದಲ್ಲಿ ಪೈಲಟ್ ಆಮ್ಲಜನಕವನ್ನು ಸರಿಯಾಗಿ ಪಡೆಯದಂತೆ ತಡೆಯುತ್ತದೆ.
ಆಕ್ಸಿಜನ್ ಮಾಸ್ಕ್ ಮಾತ್ರವಲ್ಲದೇ ಇತರ ರೆಸ್ಪಿರೇಟರ್ ಹಾಗೂ ಇಯರ್‌ಪ್ಲಗ್‌ಗಳಂತಹ ಸುರಕ್ಷತಾ ಸಾಧನಗಳನ್ನು ಧರಿಸಲು ಉದ್ದನೆಯ ಗಡ್ಡ ಅಡಚಣೆಯುಂಟುಮಾಡುತ್ತದೆ.
Manu Bhaker Diet: ಚಾಂಪಿಯನ್ ಮನು ಭಾಕರ್ ಆಹಾರಕ್ರಮ ಹೀಗಿರುತ್ತೆ