ಭೂಮಿಯ ಅಪರೂಪದ ಪ್ರಾಣಿಗಳನ್ನು ಉಳಿಸಿ: ಅಳಿವಿನಂಚಿನಲ್ಲಿರುವ 5 ಪ್ರಾಣಿಗಳಿವು
Pinterest
By Praveen Chandra B Dec 31, 2024
Hindustan Times Kannada
ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಕಾಪಾಡುವುದು ಅತ್ಯಂತ ಅಗತ್ಯ. ಇಲ್ಲವಾದರೆ, ಭವಿಷ್ಯದಲ್ಲಿ ಇವುಗಳನ್ನು ಚಿತ್ರದಲ್ಲಿ ಮಾತ್ರ ನೋಡಬೇಕಾಗಬಹುದು.
Pinterest
ಅಮೂರ್ ಚಿರತೆ: ಈಗ ಇವುಗಳ ಸಂಖ್ಯೆ 100ಕ್ಕಿಂತ ಕಡಿಮೆ ಇದೆ. ಬೇಟೆ ಮತ್ತು ಆವಾಸಸ್ಥಾನದ ನಷ್ಟವು ಅವುಗಳ ಅಸ್ತಿತ್ವಕ್ಕೆ ಅಪಾಯವನ್ನುಂಟು ಮಾಡುತ್ತಿದೆ.
Pinterest
ವಾಕ್ವಿಟಾ: ಮೆಕ್ಸಿಕೊದ ನೀರಿನಲ್ಲಿ ಕಂಡುಬರುವ ಒಂದು ಸಣ್ಣ ಜೀವಿ. ಅಕ್ರಮ ಮೀನುಗಾರಿಕೆಯಿಂದಾಗಿ ಜಗತ್ತಿನಲ್ಲಿ ಈಗ ಕೇವಲ 10 ಮಾತ್ರ ಉಳಿದಿವೆ.
Pinterest
ಮೌಂಟೇನ್ ಗೊರಿಲ್ಲಾಗಳು: ಆಫ್ರಿಕಾದ ಕಾಡುಗಳಲ್ಲಿ 1,000 ಕಡಿಮೆ ಸಂಖ್ಯೆಯಲ್ಲಿ ಮೌಂಟೇನ್ ಗೊರಿಲ್ಲಾಗಳು ಇವೆ.
Pinterest
ಯಾಂಗ್ಟ್ಜೆ ಸಾಫ್ಟ್ಶೆಲ್ ಆಮೆ: ವಿಶ್ವದ ಅಪರೂಪದ ಆಮೆ ಎಂದು ಪರಿಗಣಿಸಲ್ಪಟ್ಟಿದೆ. ಸದ್ಯ ಇವು ಮೂರು ಮಾತ್ರ ಉಳಿದಿವೆ.
Pinterest
ಸುಮಾತ್ರನ್ ಒರಾಂಗುಟನ್: 14,000ಕ್ಕಿಂತ ಕಡಿಮೆ ಒರಾಂಗುಟನ್ ಉಳಿದಿವೆ. ಆವಾಸಸ್ಥಾನದ ನಷ್ಟದಿಂದ ಅಳಿವಿನತ್ತ ಸಾಗಿವೆ.
Pinterest
ಇವುಗಳ ಉಳಿವಿಗೆ ನಾವು ಹೇಗೆ ಸಹಾಯ ಮಾಡಬಹುದು?: ವನ್ಯಜೀವಿ ಸಂಸ್ಥೆಗಳನ್ನು ಬೆಂಬಲಿಸಿ. ಪರಿಸರಕ್ಕೆ ಇಂಗಾಲ ಹೊರಸೂಸುವ ವಸ್ತುಗಳ ಬಳಕೆ ಕಡಿಮೆ ಮಾಡಿ. ಸಂರಕ್ಷಣಾ ಪ್ರಯತ್ನಗಳ ಬಗ್ಗೆ ಇತರರಿಗೆ ಶಿಕ್ಷಣ ನೀಡಿ.