ಚಳಿಗಾಲದಲ್ಲಿ ದೇಹ ಬೆಚ್ಚಗಿರಿಸಿ ಸ್ಟೈಲಿಶ್‌ ಲುಕ್ ನೀಡುವ ಸ್ವೆಟರ್‌ಗಳು

By Reshma
Nov 28, 2024

Hindustan Times
Kannada

ಚಳಿಗಾಲದಲ್ಲಿ ಸ್ವೆಟರ್, ಜಾಕೆಟ್ ಧರಿಸುವುದು ನಿಮ್ಮನ್ನು ಔಟ್ ಆಫ್ ಟ್ರೆಂಡ್ ಆಗಿ ಕಾಣುವಂತೆ ಮಾಡಬಹುದು. ಆದರೆ ಸ್ವೆಟರ್ ಧರಿಸಿದಾಗಲೂ ನೀವು ಸ್ಟೈಲಿಶ್ ಕಾಣಿ ಕಾಣಬಹುದು 

ಸ್ವೆಟರ್ ಧರಿಸಿದಾಗ ಕೂಡ ಸ್ಟೈಲಿಶ್ ಆಗಿ ಕಾಣಬೇಕು ಅಂದ್ರೆ ನೀವು ಈ ರೀತಿಯ ಸ್ವೆಟರ್‌ಗಳನ್ನು ಖರೀದಿಸಬೇಕು 

ನಟಿ ಮೌನಿರಾಯ್‌ ಬಾಡಿಕಾನ್ ಡ್ರೆಸ್ ಮೇಲೆ ಫುಲ್ ನೆಕ್‌ ಕ್ರಾಪ್ಡ್ ಸ್ವೆಟರ್ ಧರಿಸಿದ್ದಾರೆ. ಈ ರೀತಿ ನೀವು ಚಿಕ್ಕ ಸ್ವೆಟರ್ ಧರಿಸಿ ಸ್ಟೈಲಿಶ್ ಆಗಿ ಕಾಣುವ ಜೊತೆ ಚಳಿಯಿಂದ ರಕ್ಷಿಸಿಕೊಳ್ಳಬಹುದು.

ದೀಪಿಕಾ ಧರಿಸಿರುವ ಫುಲ್ ನೆಕ್ ಪಿಂಕ್ ಸ್ವೆಟರ್ ಚಳಿಗಾಲಕ್ಕೆ ಬೆಸ್ಟ್. ಇದರ ಜೊತೆ ಪಿಂಕ್ ಬಣ್ಣದ್ದೇ ಪ್ಯಾಂಟ್ ಧರಿಸಿದ್ದಾರೆ ಬಾಲಿವುಡ್ ಬೆಡಗಿ. ಸಡಿಲವಾದ ದೋಗಲೆ ಸ್ವೆಟರ್‌ಗಳು ಈಗ ಟ್ರೆಂಡ್‌ನಲ್ಲಿವೆ

ಲೂಸ್ ಫಿಟ್ ಇರುವ ಸ್ವೆಟರ್ ಸ್ಟೈಲಿಶ್ ಲುಕ್ ನೀಡುತ್ತೆ. ದೀಪಿಕಾ ಧರಿಸಿರುವ ಈ ನೀಲಿ ಬಣ್ಣದ ರೌಂಡ್ ನೆಕ್ ಸ್ವೆಟರ್ ನಿಮಗೂ ಇಷ್ಟವಾಗಬಹುದು ನೋಡಿ 

ಬಹುವರ್ಣದ ಕ್ರೊಶೆಟ್ ವರ್ಕ್ ಇರುವ ಸ್ವೆಟರ್ ಚಳಿಗಾಲದಲ್ಲಿ ಸಖತ್ ಆಗಿ ಕಾಣಿಸುತ್ತೆ. ಕೃತಿ ಕರಬಂಧ ಡೆನಿಮ್ ಜೊತೆ ಇದನ್ನ ಧರಿಸಿದ್ದಾರೆ ನೋಡಿ 

ಹಿನಾ ಖಾನ್ ಮರೂನ್ ಸ್ವೆಟರ್ ಜೊತೆ ಮ್ಯಾಚಿಂಗ್ ಜಾಕೆಟ್ ಕೂಡ ಧರಿಸಿದ್ದಾರೆ. ಇದು ಕ್ಲಾಸಿಕ್ ಲುಕ್ ಕೊಡೋದು ಸುಳ್ಳಲ್ಲ 

ಪರಿಣತಿ ಚೋಪ್ರಾ ಹೈ ನೆಕ್ ಸ್ವೆಟರ್ ಜೊತೆ ಕಪ್ಪು ಬಣ್ಣದ ಲೆದರ್ ಪ್ಯಾಂಟ್ ಧರಿಸಿದ್ದಾರೆ. ಹೀಗೆ ಒಂದೇ ಬಣ್ಣದ ಪ್ಯಾಂಟ್, ಸ್ವೆಟರ್ ಧರಿಸುವುದು ಈಗ ಟ್ರೆಂಡ್‌ 

ಬ್ಲೂ ಜೀನ್ಸ್ ಮೇಲೆ ಕಿತ್ತಳೆ, ಹಳದಿ, ಕೆಂಪು ಬಣ್ಣದ ಫುಲ್ ಸ್ಲೀವ್ಸ್‌ ಸ್ವೆಟರ್ ಕೂಡ ಧರಿಸಬಹುದು. ಇದು ಕೂಡ ಟ್ರೆಂಡಿ ಆಗಿ ಕಾಣಿಸುತ್ತದೆ 

ಸ್ವೆಟರ್‌ ರೀತಿ ಕಾಣುವ ಓವರ್ ಕೋಟ್ ಕೂಡ ಟ್ರೆಂಡಿ ಆಗಿ ಕಾಣುವಂತೆ ಮಾಡುತ್ತದೆ. ಇದನ್ನು ಯಾವುದೇ ರೀತಿಯ ಡ್ರೆಸ್ ಮೇಲೆ ಧರಿಸಬಹುದು 

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna