ಚಳಿಗಾಲದಲ್ಲಿ ತೂಕ ಹೆಚ್ಚುವುದನ್ನು ತಡೆಯುವ 5 ಮಾರ್ಗಗಳು 

By Reshma
Dec 29, 2024

Hindustan Times
Kannada

ಚಳಿಗಾಲದಲ್ಲಿ ರಾತ್ರಿ ಹೆಚ್ಚು, ಹಗಲು ಕಡಿಮೆ. ಈ ಸಮಯದಲ್ಲಿ ಹಸಿವಾಗೋದು ಕೂಡ ಜಾಸ್ತಿ. ಆದರೆ ಜೀರ್ಣಕ್ರಿಯೆ ಸಕ್ರಿಯವಾಗಿರುವುದಿಲ್ಲ 

ಈ ಸಮಯದಲ್ಲಿ ಬಿಸಿಯಾದ, ಕರಿದ ಪದಾರ್ಥಗಳನ್ನು ತಿನ್ನಲು ಜನ ಇಷ್ಟಪಡುತ್ತಾರೆ. ಈ ಕಾರಣದಿಂದ ತೂಕ ಬೇಗ ಹೆಚ್ಚುತ್ತದೆ 

ಹೆಚ್ಚು ಎಣ್ಣೆಯಂಶ ಇರುವ ಹಾಗೂ ಕ್ಯಾಲೊರಿ ಇರುವ ಆಹಾರ ಸೇವಿಸುವುದರಿಂದ ಕ್ಯಾಲೊರಿ ಹೆಚ್ಚುತ್ತದೆ. ಹಾಗಾಗಿ ದೈಹಿಕ ಚಟುವಟಿಕೆ ಇಲ್ಲ ಎಂದರೆ ಕೊಬ್ಬು ಹೆಚ್ಚಾಗುತ್ತದೆ 

ಚಳಿಗಾಲದಲ್ಲಿ ತೂಕ ಏರಿಕೆಯಾಗಬಾರದು ಅಂದ್ರೆ ನೀವು ಈ 5 ಸಲಹೆಗಳನ್ನು ತಪ್ಪದೇ ಪಾಲಿಸಬೇಕು 

ಚಳಿಗಾಲದಲ್ಲೂ ವ್ಯಾಯಾಮ ಮಾಡಿ. ಜಿಮ್‌ಗೆ ಹೋಗಲು ಸಾಧ್ಯವಾಗಿಲ್ಲ ಎಂದರೆ ಮನೆಯಲ್ಲೇ ಯೋಗ, ವ್ಯಾಯಾಮ ಮಾಡಿ 

ನಾರಿನಾಂಶ ಹಾಗೂ ಪ್ರೊಟೀನ್ ಸಮೃದ್ಧ ಆಹಾರಗಳನ್ನು ಹೆಚ್ಚು ಸೇವಿಸಿ. ಇದರಿಂದ ನಿಮ್ಮ ಹೊಟ್ಟೆ ತುಂಬಿರುತ್ತದೆ, ಕ್ಯಾಲೊರಿ ಹೆಚ್ಚುವುದಿಲ್ಲ 

ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಅಂತ ಕಡಿಮೆ ನೀರು ಕುಡಿಬೇಡಿ. ಹೆಚ್ಚು ಹೆಚ್ಚು ನೀರು ಕುಡಿಯುವುದು ಬಹಳ ಮುಖ್ಯ 

ಚಳಿ ಎನ್ನುವ ಕಾರಣಕ್ಕೆ ಮದ್ಯಪಾನ ಮಾಡುವುದನ್ನು ತಪ್ಪಿಸಿ. ಇದು ದೇಹ ತೂಕ ಹೆಚ್ಚಲು ಕಾರಣವಾಗುತ್ತದೆ 

ಎಣ್ಣೆ, ಕರಿದ ಪದಾರ್ಥ ಹೆಚ್ಚು ತಿಂದಿರುವ ದಿನ ಹೆಚ್ಚು ವ್ಯಾಯಾಮ ಮಾಡಿ ಕೊಬ್ಬು ಕರಗಿಸಿ 

ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ 

ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್‌ ಕೊಟ್ಟ ನಭಾ ನಟೇಶ್‌