ಚಳಿಗಾಲದಲ್ಲಿ ಎಳನೀರು ಕುಡಿಯುವುದು ಒಳ್ಳೆಯದಾ?

By Jayaraj
Dec 01, 2024

Hindustan Times
Kannada

ತೆಂಗಿನ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೆಚ್ಚಿನವರಿಗೆ ತಿಳಿದಿದೆ. ಆದರೆ ಚಳಿಗಾಲದಲ್ಲಿ ಎಳನೀರು ಕುಡಿಯಬಹುದೇ?

ಚಳಿಗಾಲದಲ್ಲಿ ಎಳನೀರು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ. ಹೀಗಾಗಿ ತೆಂಗಿನ ನೀರು ದೇಹವನ್ನು ಹೈಡ್ರೇಟ್ ಮಾಡಲು ಉತ್ತಮ ಆಯ್ಕೆ.

ಫೈಬರ್ ಭರಿತ ಎಳನೀರು ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ.

ಕಡಿಮೆ ಕ್ಯಾಲರಿ ಇರುವ ತೆಂಗಿನ ನೀರು ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ತೆಂಗಿನ ನೀರು ರಕ್ತದೊತ್ತಡವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಇದು ಬಹಳ ಮುಖ್ಯ.

ತೆಂಗಿನ ನೀರಿನಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಎಲೆಕ್ಟ್ರೋಲೈಟ್‌, ಕ್ಯಾಲ್ಸಿಯಂ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ.

ತೆಂಗಿನ ನೀರು ದೇಹಕ್ಕೆ ತಂಪು. ಹೀಗಾಗಿ ಸಮತೋಲಿತ ಪ್ರಮಾಣದಲ್ಲಿ ಮಾತ್ರ ಕುಡಿಯಿರಿ. ಅತಿಯಾಗಿ ಸೇವಿಸಿದರೆ ಶೀತ ಮತ್ತು ಕೆಮ್ಮು ಹೆಚ್ಚಾಗಬಹುದು.

ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ನಿರ್ದಿಷ್ಟ ಮಾಹಿತಿಗಾಗಿ ಆರೋಗ್ಯ ತಜ್ಞರಿಂದ ಸೂಕ್ತ ಸಲಹೆ ಪಡೆಯಿರಿ.

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?