ಚಳಿಗಾಲದಲ್ಲಿ ಕೊತ್ತಂಬರಿ ಬೀಜದ ನೀರು ಕುಡಿಯುವುದರ ಪ್ರಯೋಜನಗಳಿವು
Pixabay
By Priyanka Gowda Dec 05, 2024
Hindustan Times Kannada
ಕೊತ್ತಂಬರಿ ಬೀಜದಲ್ಲಿ ಔಷಧೀಯ ಗುಣಗಳಿವೆ. ಕೊತ್ತಂಬರಿ ಬೀಜಗಳನ್ನು ನೆನೆಸಿ ಅದರ ನೀರು ಕುಡಿಯುವುದರಿಂದ ಚಳಿಗಾಲದಲ್ಲಿ ಈ ಪ್ರಯೋಜನಗಳನ್ನು ಪಡೆಯಬಹುದು.
Pixabay
ಚಳಿಗಾಲದಲ್ಲಿ ಜೀರ್ಣಕ್ರಿಯೆ ಸಮಸ್ಯೆ ಸಾಮಾನ್ಯವಾದ್ದರಿಂದ ಕೊತ್ತಂಬರಿ ನೀರು ಕುಡಿದರೆ ಜೀರ್ಣಕ್ರಿಯೆ ತೊಂದರೆ ನಿವಾರಣೆಯಾಗುತ್ತದೆ. ಕೊತ್ತಂಬರಿಯಲ್ಲಿ ಫೈಬರ್ ಅಂಶ ಇರುವುದರಿಂದ ಪರಿಹಾರ ದೊರಕುತ್ತದೆ.
Pixabay
ಉತ್ಕರ್ಷಣ ನಿರೋಧಕಗಳು ಮತ್ತು ಪ್ರಮುಖ ಜೀವಸತ್ವಗಳಲ್ಲಿ ಸಮೃದ್ಧವಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕವಾಗಿದೆ. ಅನಾರೋಗ್ಯ ತಡೆಯಲು ಸಹಕಾರಿ.
freepik
ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿ. ಮಧುಮೇಹಿಗಳು ಈ ನೀರು ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು.
freepik
ದೇಹದಿಂದ ತ್ಯಾಜ್ಯ ಹೊರ ಹಾಕಲು ಇದರ ನೀರು ಸಹಕಾರಿ. ಹಾಗೆಯೇ ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೂ ಉಪಯುಕ್ತವಾಗಿದೆ.
freepik
ನಿಯಮಿತವಾಗಿ ಇದರ ನೀರು ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯಕ್ಕೆ ಉತ್ತಮ. ಕಲ್ಮಶಗಳನ್ನು ತೆಗೆದುಹಾಕಲು ಸಹಕಾರಿ. ಚರ್ಮದ ಕಾಂತಿಯನ್ನೂ ಹೆಚ್ಚಿಸುತ್ತದೆ.
Canva
ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೂ ಉತ್ತಮ.
Canva
ಈ ಎಲ್ಲಾ ಕಾರಣದಿಂದ ಕೊತ್ತಂಬರಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
Canva
ರಕ್ಷಣೆಗೆ ಅತಿಹೆಚ್ಚು ಖರ್ಚು ಮಾಡುವ ದೇಶಗಳಿವು; ಭಾರತದ ವೆಚ್ಚ ಎಷ್ಟು?