ಚಳಿಗಾಲದಲ್ಲಿ ಮೊಳಕೆ ಬರಿಸಿದ ಹೆಸರುಕಾಳು ತಿಂದರೆ ಸಿಗುವ ಆರೋಗ್ಯ ಪ್ರಯೋಜನಗಳು
freepik
By Priyanka Gowda
Dec 08, 2024
Hindustan Times
Kannada
ಚಳಿಗಾಲದ ಮೊಳಕೆ ಬರಿಸಿದ ಹೆಸರುಕಾಳು ತಿಂದರೆ ಹಲವು ಆರೋಗ್ಯ ಪ್ರಯೋಜನಗಳಿವೆ. ದೇಹಕ್ಕೆ ಬೇಕಾದ ಅಗತ್ಯ ಪ್ರೋಟೀನ್‍ಗಳು ಸಿಗುತ್ತವೆ.
freepik
ಮೊಳಕೆ ಬರಿಸಿದ ಹೆಸರುಕಾಳಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
freepik
ಇದು ವಿಟಮಿನ್ ಕೆ ಅನ್ನು ಹೊಂದಿರುತ್ತದೆ. ರಕ್ತ ಹೆಪ್ಪುಗಟ್ಟುವಿಕೆಗೆ ಅವಶ್ಯಕವಾಗಿದೆ. ಮೂಳೆಗಳಿಗೆ ಪೌಷ್ಠಿಕಾಂಶವನ್ನು ಒದಗಿಸುತ್ತದೆ.
freepik
ತೂಕ ನಷ್ಟಕ್ಕೆ ಸಹಾಯ ಮಾಡುವ ಅತ್ಯುತ್ತಮ ಆಹಾರಗಳಲ್ಲಿ ಇದು ಒಂದಾಗಿದೆ. ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ.
freepik
ಚಳಿಗಾಲದಲ್ಲಿ ಹೃದಯದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತವೆ. ಹೀಗಾಗಿ ಇದರ ಸೇವನೆಯು ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದ್ದು, ರಕ್ತಪರಿಚಲನೆಯನ್ನು ಸುಧಾರಿಸುತ್ತದೆ.
freepik
ಇದನ್ನು ಸೇವಿಸಿದರೆ ಜೀರ್ಣಕ್ರಿಯೆ ಸಮಸ್ಯೆ ಇರುವುದಿಲ್ಲ. ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವೂ ಸ್ಥಿರವಾಗುತ್ತದೆ.
freepik
ಚರ್ಮದ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ನಿಯಮಿತವಾಗಿ ಸೇವಿಸುವುದರಿಂದ ಚರ್ಮದ ಸಮಸ್ಯೆಗಳನ್ನು ಗುಣಪಡಿಬಹುದು.
freepik
ಸಂಜೆ ನಂತರ ಹೂಗಳು, ಎಲೆಗಳನ್ನು ಏಕೆ ಕೀಳಬಾರದು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ