ಚಳಿಗಾಲದಲ್ಲಿ ದಾಲ್ಚಿನ್ನಿ ಸೇವಿಸುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನಗಳು

freepik

By Priyanka Gowda
Dec 07, 2024

Hindustan Times
Kannada

ಆರೋಗ್ಯಕ್ಕೆ ದಾಲ್ಚಿನ್ನಿ ತುಂಬಾ ಉತ್ತಮ. ವಿಶೇಷವಾಗಿ ಚಳಿಗಾಲದಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ದಾಲ್ಚಿನ್ನಿ ಸೇವಿಸುವುದರ ಪ್ರಯೋಜನಗಳು ಇಲ್ಲಿವೆ.

freepik

ಇದು ದೇಹಕ್ಕೆ ಉಷ್ಣತೆಯನ್ನು ನೀಡುವುದರಿಂದ ಚಳಿಗಾಲದಲ್ಲಿ ಶೀತದಿಂದ ಪರಿಹಾರ ಒದಗಿಸುತ್ತದೆ. ದಾಲ್ಚಿನ್ನಿ ನೆನೆಸಿ ಚಹಾ ಮಾಡಿ ಕುಡಿಯಬಹುದು ಅಥವಾ ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು.

freepik

ಹವಾಮಾನ ತಂಪಾಗಿರುವುದರಿಂದ ಸೋಮಾರಿತನದ ಭಾವನೆ ಕಾಡುತ್ತದೆ. ದಾಲ್ಚಿನ್ನಿ ಸೇವನೆಯು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಸೋಮಾರಿತನವನ್ನು ಹೋಗಲಾಡಿಸಲು ಸಹಕಾರಿಯಾಗಿದೆ.

freepik

ಜೀರ್ಣಾಂಗ ವ್ಯವಸ್ಥೆಗೂ ಇದು ಉತ್ತಮ. ತಿಂದ ಆಹಾರ ಬೇಗ ಜೀರ್ಣವಾಗುತ್ತದೆ. ಚಳಿಗಾಲದಲ್ಲಿ ಜೀರ್ಣಕ್ರಿಯೆಯಿಂದ ತೊಂದರೆಪಡುತ್ತಿರುವವರಿಗೆ ದಾಲ್ಚಿನ್ನಿ ಉಪಯುಕ್ತವಾಗಿದೆ.

freepik

ದಾಲ್ಚಿನ್ನಿ ಉತ್ಕರ್ಷಣ ನಿರೋಧಕಗಳು ಮತ್ತು  ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. 

freepik

ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ದಾಲ್ಚಿನ್ನಿ ತುಂಬಾ ಸಹಾಯಕವಾಗಿದೆ. ಇದು ಹಸಿವನ್ನು ಕಡಿಮೆ ಮಾಡಲು ಹಾಗೂ ಹೆಚ್ಚು ಕ್ಯಾಲೊರಿಗಳನ್ನು ಸೇವಿಸದಿರಲು ಸಹಕಾರಿಯಾಗಿದೆ.

freepik

ದಾಲ್ಚಿನ್ನಿಯನ್ನು ರಾತ್ರಿಯಿಡೀ ನೆನೆಸಿ, ಬೆಳಗ್ಗೆ ನೀರು ಕುಡಿಯಿರಿ. ದಾಲ್ಚಿನ್ನಿ ಪುಡಿಯನ್ನು ಕುದಿಸಿ ಚಹಾ ಮಾಡಬಹುದು. ರುಚಿಗೆ ಜೇನುತುಪ್ಪವನ್ನು ಸೇರಿಸಬಹುದು. ವಿವಿಧ ಪಾಕವಿಧಾನಗಳಲ್ಲಿಯೂ ದಾಲ್ಚಿನ್ನಿಯನ್ನು ಬಳಸಬಹುದು.

freepik

ಭಾರತದ 5ನೇ ಶ್ರೀಮಂತ ಕ್ರಿಕೆಟಿಗ ಸೆಹ್ವಾಗ್; ಎಷ್ಟು ಕೋಟಿ ಒಡೆಯ ವೀರು?