ಚಳಿಗಾಲದಲ್ಲಿ ನೋಯುತ್ತಿರುವ ಗಂಟಲುನೋವಿಗೆ ಇಲ್ಲಿದೆ ಪರಿಹಾರ
freepik
By Priyanka Gowda Dec 08, 2024
Hindustan Times Kannada
ಚಳಿಗಾಲದಲ್ಲಿ ಶೀತ ಮತ್ತು ವೈರಲ್ ಜ್ವರ ಸಾಮಾನ್ಯವಾಗಿದೆ. ಋತುಮಾನದ ಕಾಯಿಲೆಗಳಿಂದಾಗಿ ಚಳಿಗಾಲದಲ್ಲಿ ಗಂಟಲು ನೋವಿನ ಸಮಸ್ಯೆಗಳು ಸಾಮಾನ್ಯವಾಗಿದೆ.
freepik
ವೈರಲ್ ಸೋಂಕುಗಳು ಸುಮಾರು ಶೇ. 90ರಷ್ಟು ಗಂಟಲು ನೋವಿಗೆ ಕಾರಣವಾಗುತ್ತದೆ. ಒಣ ಗಾಳಿಯಲ್ಲಿ ಉಸಿರಾಡುವಿಕೆಯು ಗಂಟಲಿನಿಂದ ತೇವಾಂಶವನ್ನು ಸೆಳೆಯುವುದರಿಂದ ಈ ಅಸ್ವಸ್ಥತೆಗೆ ಕಾರಣವಾಗುತ್ತದೆ.
freepik
ಚಳಿಗಾಲದಲ್ಲಿ ಗಂಟಲು ನೋವನ್ನು ತಡೆಯಲು ವೈದ್ಯರು ಈ 7 ಸಲಹೆಗಳನ್ನು ನೀಡಿದ್ದಾರೆ.
freepik
ಮೂಳೆ ಸೂಪ್‌ನಿಂದ ದೇಹಕ್ಕೆ ಕ್ಯಾಲ್ಸಿಯಂ, ಸತು ಹಾಗೂ ಮೆಗ್ನೀಸಿಯಂ ಪೋಷಕಾಂಶಗಳು ಲಭ್ಯವಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
freepik
ತಾಜಾ ಬೆಳ್ಳುಳ್ಳಿ, ಲವಂಗವನ್ನು ಪುಡಿಮಾಡಿ ಅಗಿಯಿರಿ ಅಥವಾ ಜೇನುತುಪ್ಪ ಹಾಗೂ ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿಯೊಂದಿಗೆ ಬೆರೆಸಿದ ಬಿಸಿನೀರನ್ನು ಕುಡಿಯಿರಿ.
freepik
ಸ್ಟೀಮ್ ಅನ್ನು ತೆಗೆದುಕೊಳ್ಳಬಹುದು. ಇದು ಕೂಡ ಗಂಟಲು ನೋವಿಗೆ ಪರಿಹಾರ ನೀಡುತ್ತದೆ.
freepik
ದಾಲ್ಚಿನ್ನಿ, ಜಾಯಿಕಾಯಿ ಅಥವಾ ಶುಂಠಿಯಂತಹ ಮಸಾಲೆಗಳೊಂದಿಗೆ ನೀರು, ಜೇನುತುಪ್ಪ ಮತ್ತು ನಿಂಬೆ ರಸದೊಂದಿಗೆ ಮಾಡಿದ ಬಿಸಿ ನೀರು ಕುಡಿಯಿರಿ.
freepik
ದೇಹವನ್ನು ಮಾಲಿನ್ಯಕಾರಕಗಳಿಂದ ರಕ್ಷಿಸಲು ಮಾಸ್ಕ್ ಬಳಸಿ.
freepik
ಆಗಾಗ ನೀರು ಕುಡಿಯುವುದು, ದೇಹವನ್ನು ತೇವಾಂಶದಿಂದ ಇಡುವುದು, ಕೈಗಳನ್ನು ತೊಳೆಯುವುದು ಇತ್ಯಾದಿ ಗಂಟಲುನೋವನ್ನು ತಡೆಯಲು ಸಹಾಯ ಮಾಡುತ್ತದೆ.
freepik
ಅಡುಗೆ ಸೋಡಾದ ನೀರಿನಿಂದ ಗಾರ್ಗ್ಲಿಂಗ್ ಮಾಡುವುದರಿಂದ ಸೋಂಕನ್ನು ದೂರವಿಡುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.