ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಹಣ್ಣು, ತರಕಾರಿಗಳನ್ನು ಸೇವಿಸುವುದು ಮುಖ್ಯ. ಇದು ದೇಹಕ್ಕೆ ಪೋಷಣೆ ನೀಡಿ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ತಪ್ಪದೇ ಸೇವಿಸಬೇಕಾದ ತರಕಾರಿಗಳು ಯಾವುವು ಎಂಬುದನ್ನು ತಿಳಿಯೋಣ.
slurrp
ಮೂಲಂಗಿ: ತೀಕ್ಷ್ಣ ಪರಿಮಳ, ವಿಶಿಷ್ಟ ರುಚಿಯ ಮೂಲಂಗಿ ಚಳಿಗಾಲಕ್ಕೆ ಬೆಸ್ಟ್ . ಇದರಿಂದ ಸಲಾಡ್, ಪರೋಟ, ಪಲ್ಯ, ಸಾರು ಮುಂತಾದವುಗಳನ್ನು ತಯಾರಿಸಿ ಸವಿಯಬಹುದು.
slurrp
ಕ್ಯಾರೆಟ್: ಕ್ಯಾರೆಟ್ ಹಲ್ವಾ ಸವಿಯದೇ ಚಳಿಗಾಲ ಪೂರ್ಣಗೊಳ್ಳುವುದಿಲ್ಲ. ಕ್ಯಾರೆಟ್ ಚಳಿಗಾಲಕ್ಕೆ ಉತ್ತಮವಾದ ತರಕಾರಿ. ಇದರಿಂದ ಸಿಹಿ, ಖಾರ ಮುಂತಾದ ಅಡುಗೆ ತಯಾರಿಸಿ ಸವಿಯಬಹುದು.
slurrp
ಬೀಟ್ರೂಟ್: ಚಳಿಗಾಲಕ್ಕೆ ಬೀಟ್ರೂಟ್ ಸಲಾಡ್, ಬೀಟ್ರೂಟ್ ರಾಯಿತಾ ಅತ್ಯುತ್ತಮವಾಗಿವೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಿಸಲು ಇದು ಉತ್ತಮವೆಂದು ಪರಿಗಣಿಸಲಾಗಿದೆ.
ಚಕ್ಕೋತಾ ಸೊಪ್ಪು: ಇದೊಂದು ಹಸಿರು ತರಕಾರಿಯಾಗಿದೆ. ಪೋಷಕಾಂಶಗಳಿಂದ ಸಮೃದ್ಧವಾದ ಚಕ್ಕೋತಾ ಸೊಪ್ಪು ಚಳಿಗಾಲದ ಡಯಟ್‌ಗೆ ಉತ್ತಮ ಸೇರ್ಪಡೆಯಾಗಿದೆ.
slurrp
ಬಟಾಣಿ: ಚಳಿಗಾಲಕ್ಕೆ ಹಸಿರು ತಾಜಾ ಬಟಾಣಿ ಉತ್ತಮವಾಗಿದೆ. ಅದರಿಂದ ಪರೋಟ, ಕರಿ, ಪಲಾವ್ ಮುಂತಾದ ರುಚಿಯಾದ ಅಡುಗೆ ತಯಾರಿಸಬಹುದು.
slurrp
ಪಾಲಕ್ ಸೊಪ್ಪು: ಇದು ದೇಹಕ್ಕೆ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ನೀಡುತ್ತವೆ. ಇದರಿಂದ ತಯಾರಿಸಿದ ಸೂಪ್, ಪರೋಟ ಇತ್ಯಾದಿ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸಬಹುದು.
slurrp
ಮೆಂತೆ ಸೊಪ್ಪು: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಮೆಂತೆ ಸೊಪ್ಪು ಸಹಾಯ ಮಾಡುತ್ತದೆ. ಈ ಸೊಪ್ಪಿನಿಂದ ಪರೋಟ, ಪಲ್ಯ ಮುಂತಾದ ಅಡುಗೆಗಳನ್ನು ತಯಾರಿಸಿ, ಸೇವಿಸುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
Freepik
ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ