ಚಳಿಗಾಲದ ಒಣ ಚರ್ಮಕ್ಕೆ ದೇಸಿ ತುಪ್ಪ, ತೆಂಗಿನೆಣ್ಣೆ ಮಿಶ್ರಣ ಹಚ್ಚುವುದರ ಪ್ರಯೋಜನಗಳಿವು
freepik
By Priyanka Gowda
Dec 27, 2024
Hindustan Times
Kannada
ಚಳಿಗಾಲದಲ್ಲಿ ಚರ್ಮ ಒಣಗಿ ನಿರ್ಜೀವವಾಗುತ್ತದೆ. ತೇವಾಂಶದ ಕೊರತೆಯು ತುರಿಕೆ ಮತ್ತು ಸುಡುವಿಕೆಗೆ ಕಾರಣವಾಗಬಹುದು.
freepik
ದೇಸಿ ತುಪ್ಪದಲ್ಲಿ ವಿಟಮಿನ್ ಎ ಮತ್ತು ಇ ಇದ್ದು, ಇದು ಚರ್ಮವನ್ನು ಪೋಷಿಸಲು ಮತ್ತು ತೇವಾಂಶ ಉಳಿಸಿಕೊಳ್ಳಲು ಸಹಕಾರಿ.
freepik
ತೆಂಗಿನೆಣ್ಣೆಯು ಚರ್ಮವನ್ನು ಮೃದುಗೊಳಿಸಲು ಮತ್ತು ತೇವಾಂಶ ಉಳಿಸಿಕೊಳ್ಳಲು ಸಹಕಾರಿ.
freepik
ದೇಸಿ ತುಪ್ಪ ಹಾಗೂ ತೆಂಗಿನೆಣ್ಣೆಯ ಮಿಶ್ರಣವು ಚರ್ಮಕ್ಕೆ ಅತ್ಯುತ್ತಮ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.
Pexel
ಪ್ರತಿದಿನ ಸ್ನಾನದ ನಂತರ ಈ ಮಿಶ್ರಣವನ್ನು ತ್ವಚೆಯ ಮೇಲೆ ಹಚ್ಚುವುದರಿಂದ ತ್ವಚೆಯು ದಿನವಿಡೀ ಮೃದುವಾಗಿರುತ್ತದೆ.
Pexel
ರಾತ್ರಿ ಮಲಗುವ ಮುನ್ನ ತುಪ್ಪ ಮತ್ತು ತೆಂಗಿನೆಣ್ಣೆಯನ್ನು ಚರ್ಮಕ್ಕೆ ಹಚ್ಚುವುದರಿಂದ ತ್ವಚೆ ತೇವಾಂಶಯುಕ್ತವಾಗಿರಿಸಲು ಸಹಾಯ ಮಾಡುತ್ತದೆ.
Pexel
ದೇಸಿ ತುಪ್ಪ ಮತ್ತು ತೆಂಗಿನೆಣ್ಣೆಯ ಮಿಶ್ರಣವು ಒಣ ಚರ್ಮಕ್ಕೆ ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರ.
Pexel
ಗಮನಿಸಿ: ಈ ಮನೆಮದ್ದು ಉಪಯೋಗಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದಿದ್ದರೂ, ನಿಮ್ಮ ಚರ್ಮವು ಸೂಕ್ಷ್ಮವಾಗಿದ್ದರೆ ಮೊದಲು ತಜ್ಞರನ್ನು ಸಂಪರ್ಕಿಸುವುದು ಸೂಕ್ತ.
Pexel
ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ