ನವ ವಧುವಿಗೆ ಸುಂದರವಾದ ಚಿನ್ನದ ಕಿವಿಯೋಲೆಗಳ ವಿನ್ಯಾಸ ಇಲ್ಲಿದೆ

By Priyanka Gowda
Feb 10, 2025

Hindustan Times
Kannada

ಈ ರೀತಿಯ ಭಾರವಾದ ಕಿವಿಯೋಲೆ ವಿನ್ಯಾಸವು ಇಂದಿಗೂ ಟ್ರೆಂಡ್‌ನಲ್ಲಿದೆ. ಮಹಿಳೆಯರು ಇಂತಹ ಕಿವಿಯೋಲೆಗಳನ್ನು ಧರಿಸಲು ಇಷ್ಟಪಡುತ್ತಾರೆ.

ಮನೆಗೆ ಕಾಲಿಡಲಿರುವ ಸೊಸೆಗೆ ಚಿನ್ನದ ಕಿವಿಯೋಲೆ ಉಡುಗೊರೆ ಕೊಡುವ ಬಗ್ಗೆ ಯೋಚಿಸುತ್ತಿದ್ದರೆ, ಈ ವಿನ್ಯಾಸದ ಕಿವಿಯೋಲೆಯನ್ನು ಆರಿಸಿಕೊಳ್ಳಬಹುದು.

ಇತ್ತೀಚೆಗೆ ಟೆಂಪಲ್ ಜ್ಯುವೆಲ್ಲರಿ ಬಹಳ ಟ್ರೆಂಡ್‌ನಲ್ಲಿದೆ. ಇಂದು ತುಂಬಾ ಸುಂದರವಾಗಿ ಕಾಣುತ್ತದೆ.

Instagram: goldjhumkalook

ವಿಭಿನ್ನ ಶೈಲಿಯ ಕಿವಿಯೋಲೆ ಬಯಸುವಿರಾದರೆ ಹೂವಿನಾಕೃತಿಯಿರುವ ಚಿನ್ನದ ಕಿವಿಯೋಲೆಗೆ ಮುತ್ತನ್ನು ಪೋಣಿಸಲಾಗಿರುವ ಈ ರೀತಿಯ ಕಿವಿಯೋಲೆಯನ್ನು ಆರಿಸಿಕೊಳ್ಳಬಹುದು.

Instagram: goldjhumkalook

ನವ ವಧುವಿಗೆ ಹಳೆಯ ವಿನ್ಯಾಸದ ಆಧುನಿಕ ಶೈಲಿಯ ಕಿವಿಯೋಲೆಯನ್ನು ಉಡುಗೊರೆಯಾಗಿ ಕೊಡಬಹುದು. ಈ ವಿನ್ಯಾಸ ವಿಭಿನ್ನವಾಗಿ ಬಹಳ ಸುಂದರವಾಗಿದೆ.

Instagram: goldjhumkalook

ಹೆಣ್ಮಕ್ಕಳು ಫ್ಯಾನ್ಸಿ ಶೈಲಿಯ ವಿನ್ಯಾಸವನ್ನು ಇಷ್ಟಪಡುತ್ತಾರೆ. ಹೀಗಾಗಿ ಈ ವಿನ್ಯಾಸದ ಕಿವಿಯೋಲೆಯನ್ನು ಉಡುಗೊರೆಯಾಗಿ ಕೊಡಬಹುದು. ಇದು ಕಿವಿಗಳಿಗೆ ತುಂಬಾ ಚೆನ್ನಾಗಿ ಕಾಣುತ್ತದೆ.

Instagram: goldjhumkalook

ಫ್ರಿಲ್ ವಿನ್ಯಾಸವಿರುವ ಈ ಕಿವಿಯೋಲೆಗಳು ಇಂದಿನ ಟ್ರೆಂಡ್ ಆಗಿವೆ. ಈ ಹಿಂದೆಯಿಂದಲೂ ಫ್ರಿಲ್ ವಿನ್ಯಾಸದ ಕಿವಿಯೋಲೆಗಳಿದ್ದವು. ಇದೀಗ ಸ್ವಲ್ಪ ವಿಭಿನ್ನ ಲುಕ್‌ ನೀಡಲಾಗಿರುವ ಈ ವಿನ್ಯಾಸ ಬಹಳ ಚೆನ್ನಾಗಿದೆ.  

Instagram: goldjhumkalook

ಒಂದೇ ತರಹದ ಜುಮ್ಕಾ ನೋಡಿ ಬೇಸರವಾಗಿದ್ದರೆ ಗಂಟೆ ವಿನ್ಯಾಸವಿರುವ ಈ ಕಿವಿಯೋಲೆಗಳನ್ನು ಖರೀದಿಸಬಹುದು.

Instagram: goldjhumkalook

ಡಬಲ್ ಪ್ಲೇಟೆಡ್ ಜುಮ್ಕಾ ವಿನ್ಯಾಸವು ಸಹ ಬಹಳ ಚೆನ್ನಾಗಿ ಕಾಣುತ್ತದೆ. ಈ ಕಿವಿಯೋಲೆಯು ಸುಂದರವಾಗಿ ಕಾಣುತ್ತದೆ.

Instagram: goldjhumkalook

ಓಲೆ ನೋಡಲು ದಪ್ಪವಾಗಿ, ವಿಭಿನ್ನವಾಗಿರಬೇಕು ಎಂದು ಹುಡುಕುತ್ತಿದ್ದರೆ, ಈ ವಿಶಿಷ್ಟ ಶೈಲಿಯ ಕಿವಿಯೋಲೆಗಳನ್ನು ಖರೀದಿಸಬಹುದು.

Instagram: goldjhumkalook

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌