ಇತ್ತೀಚೆಗೆ ಸೀರೆ ಜತೆಗೆ ಚಂದನೆಯ ಕುಪ್ಪಸ ವಿನ್ಯಾಸವು ತುಂಬಾ ಟ್ರೆಂಡಿಂಗ್‍ನಲ್ಲಿದೆ. ನೀವು ಸೀರೆ ಕುಪ್ಪಸಗೆ ಯಾವ ರೀತಿಯ ವಿನ್ಯಾಸವಿಡುವುದು ಎಂದು ಯೋಚಿಸುತ್ತಿದ್ದರೆ ಬಾಲಿವುಡ್ ನಟಿಯರ ಈ ಸೀರೆ ಬ್ಲೌಸ್ ಡಿಸೈನ್‍ಗಳನ್ನು ಅನುಸರಿಸಬಹುದು.
Pinterest
ಇಲ್ಲಿ ಬಿಳಿ-ಬೂದು ಬಣ್ಣದ ಮಿಶ್ರಿತ ಸೀರೆಗೆ ನಟಿ ಶ್ರದ್ಧಾ ಕಪೂರ್ ವಿಭಿನ್ನ ಶೈಲಿಯ ಕುಪ್ಪಸ ಧರಿಸಿದ್ದಾರೆ. ಆಲ್ಟರ್ ನೆಕ್ ವಿನ್ಯಾಸದ ಈ ಕುಪ್ಪಸ ತುಂಬಾ ಸುಂದರವಾಗಿ ಕಾಣುತ್ತಿದೆ.
Instagram
ಕೆಂಪು ಬಣ್ಣದ ಬಾರ್ಡರ್ ಸೀರೆಗೆ ಹಸಿರು ಬಣ್ಣದ ಕುಪ್ಪಸ ತೊಟ್ಟು ಮಿಂಚಿದ್ದಾರೆ ನಟಿ ಜಾನ್ವಿ ಕಪೂರ್. ಇದರಲ್ಲಿ ತುಂಬು ತೋಳಿನ ಕುಪ್ಪಸವನ್ನು ಧರಿಸಿದ್ದಾರೆ.
Pinterest
ಸ್ಟ್ರಾಪ್ಪಿ ಬ್ಲೌಸ್ ವಿನ್ಯಾಸವಿರುವ ಕುಪ್ಪಸವನ್ನು ನಟಿ ಕಿಯಾರಾ ಅಡ್ವಾಣಿ ಧರಿಸಿದ್ದಾರೆ. ಗುಲಾಬಿ ಬಣ್ಣದ ಸೀರೆಗೆ ಈ ಕುಪ್ಪಸ ತುಂಬಾ ಸುಂದರವಾಗಿ ಕಾಣುತ್ತಿದೆ.
Instagram
ಶವಾರಿ ವಾಘ್ ಮಿನಿ ಬ್ಲೌಸ್ ಧರಿಸಿದ್ದು, ಕಪ್ಪು ಬಣ್ಣದ ಸೀರೆಗೆ ಇದು ಬಹಳ ಸುಂದರವಾಗಿ ಕಾಣುತ್ತಿದೆ.
Pinterest
ಮ್ಯಾಚಿಂಗ್ ಫುಲ್ ನೆಕ್ ಬ್ಲೌಸ್‍ಗಳು ಈಗಲೂ ಸಖತ್ ಟ್ರೆಂಡಿಂಗ್‍ನಲ್ಲಿದೆ. ಕೃತಿ ಸೆನನ್‍ಗೆ ಇದು ತುಂಬಾ ಚೆನ್ನಾಗಿ ಒಪ್ಪುತ್ತಿದೆ.
Instagram
ಆಲಿಯಾ ಭಟ್ ಧರಿಸಿರುವ ಟ್ಯೂಬ್, ಕಾರ್ಸೆಟ್ ಬ್ಲೌಸ್ ನೋಡಲು ಸರಳವಾಗಿ ಕಂಡರೂ ತುಂಬಾ ಚೆನ್ನಾಗಿ ಒಪ್ಪುತ್ತದೆ. ಗ್ಲಾಮರಸ್ ಆಗಿರಲು ಇಷ್ಟಪಡುವವರು ಈ ರೀತಿಯ ಕುಪ್ಪಸ ಧರಿಸಬಹುದು.
Instagram
ಸೀಕ್ವೆನ್ಸ್ ಸೀರೆಗೆ ಮ್ಯಾಚಿಂಗ್ ಸೀಕ್ವೆನ್ಸ್ ಕುಪ್ಪಸ ಧರಿಸಿದ್ದಾರೆ ಕರೀನಾ ಕಪೂರ್. ಇದು ನಟಿಗೆ ವಿಭಿನ್ನ ಲುಕ್ ನೀಡಿದೆ.
Instagram
ಫುಲ್ ಸ್ಲೀವ್ ಕುಪ್ಪಸ ಕೆಲವೊಂದು ಸೀರೆಗಳಿಗೆ ಬಹಳ ಚೆನ್ನಾಗಿ ಒಪ್ಪುತ್ತದೆ. ಇಲ್ಲಿ ದೀಪಿಕಾ ಪಡುಕೋಣೆ ಬನಾರಸಿ ಸೀರೆಗೆ ಪೂರ್ಣ ತೋಳಿನ ಕುಪ್ಪಸ ಧರಿಸಿ ಮಿಂಚಿದ್ದಾರೆ.
Pinterest
ಈಗಂತೂ ಬ್ಯಾಕ್‌ಲೆಸ್ ಬ್ಲೌಸ್ ಸಖತ್ ಟ್ರೆಂಡಿಂಗ್‍ನಲ್ಲಿದೆ. ಸೋನಂ ಕಪೂರ್ ಅವರು ಧರಿಸಿರುವ ಬ್ಯಾಕ್‍ಲೆಸ್ ಕುಪ್ಪಸದ ವಿನ್ಯಾಸವಿದು.
Instagram
ಶಿಲ್ಪಾ ಶೆಟ್ಟಿ ಧರಿಸಿರುವ ಕಾರ್ಸೆಟ್ ಕುಪ್ಪಸ ಬಹಳ ಸುಂದರವಾಗಿದೆ. ಈ ರೀತಿಯ ಸೀರೆಯುಟ್ಟಾಗ ಕಾರ್ಸೆಟ್ ಕುಪ್ಪಸ ಧರಿಸಿದರೆ ತುಂಬಾ ಸುಂದರವಾಗಿ ಕಾಣಬಹುದು.
Instagram
ಜಿಎಸ್ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು