ಬೇಸಿಗೆಯಲ್ಲಿ ಹೀಗಿರಲಿ ಮುಟ್ಟಿನ ದಿನಗಳು; ಈ ವಿಚಾರಗಳನ್ನು ತಪ್ಪಿಯೂ ಮರಿಬೇಡಿ
Pexels
By Reshma Mar 26, 2024
Hindustan Times Kannada
ಬೇಸಿಗೆಯಲ್ಲಿ ಮುಟ್ಟಿನ ದಿನಗಳು ಅಹಿತಕರವಾಗಿರುತ್ತವೆ. ವಿಪರೀತ ಬಿಸಿಲು ಹಾಗೂ ಬೆವರಿನ ಕಾರಣದಿಂದ ಈ ಸಮಯದಲ್ಲಿ ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಜೊತೆಗೆಆರೋಗ್ಯದ ಬಗ್ಗೆಯೂ ಗಮನ ಕೊಡಬೇಕು
Pexels
ಅಧಿಕ ಸ್ರಾವ ಹೊಂದಿರುವವರು ಏಕಕಾಲದಲ್ಲಿ 2 ಪ್ಯಾಡ್‌ಗಳನ್ನು ಧರಿಸುತ್ತಾರೆ. ಇದರಿಂದ ರಕ್ತಸ್ರಾವದಿಂದ ಬಟ್ಟೆ ಕಲೆಯಾಗುವುದು, ಪದೇ ಪದೇ ಪ್ಯಾಡ್ ಬದಲಿಸುವ ಕಷ್ಟ ಇರುವುದಿಲ್ಲವಾದರೂ, ಇದು ಯೋನಿ ಪ್ರದೇಶದಲ್ಲಿ ಸೋಂಕು ಉಂಟಾಗಲು ಕಾರಣವಾಗಬಹುದು.
Pexels
ಮುಟ್ಟಿನ ನೈರ್ಮಲ್ಯದ ಜೊತೆಗೆ, ಒಟ್ಟಾರೆ ದೈಹಿಕ ನೈರ್ಮಲ್ಯದ ಕಾಳಜಿಯನ್ನೂ ಮಾಡಬೇಕು. ಯೋನಿ ಮತ್ತು ಮೂತ್ರನಾಳದ ಸೋಂಕುಗಳು (UTIs) ಬೇಸಿಗೆಯಲ್ಲಿ ಸಾಮಾನ್ಯ. ಬೆವರುವಿಕೆಯು ಚರ್ಮದ ಕಿರಿಕಿರಿ, ದದ್ದು ತುರಿಕೆ ಇತ್ಯಾದಿಗಳಿಗೆ ಕಾರಣವಾಗಬಹುದು.
Pexels
ಮುಟ್ಟಿನ ದಿನಗಳಲ್ಲಿ ದಿನಕ್ಕೆ ಎರಡು ಬಾರಿಯಾದರೂ ಸ್ನಾನ ಮಾಡಲು ಪ್ರಯತ್ನಿಸಿ ಮತ್ತು ಬೆವರು ಮೈಯಲ್ಲಿ ಹೆಚ್ಚು ಹೊತ್ತು ಇರಬೇಡಿ. ಚರ್ಮಸ್ನೇಹಿ ಹತ್ತಿ ಬಟ್ಟೆಗಳನ್ನು ಧರಿಸಿ. ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ.
Pexels
ಹೊರಗಡೆ ಹೋಗುವಾಗ ಮರೆಯದೇ ಟ್ಯಾಂಪೂನ್ ಮತ್ತು ಪ್ಯಾಡ್‌ಗಳನ್ನು ಒಯ್ಯಿರಿ
Pexels
ಮುಟ್ಟಿನ ಸಮಯದಲ್ಲಿ ತೀವ್ರವಾದ ವ್ಯಾಯಾಮವನ್ನು ತಪ್ಪಿಸಿ. ವಾಕಿಂಗ್‌ನಂತಹ ಸರಳ ವ್ಯಾಯಾಮಕ್ಕೆ ಒತ್ತು ನೀಡಿ.
Pexels
ಮುಟ್ಟಿನ ದಿನಗಳಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ. ನಿರ್ಜಲೀಕರಣ ಉಂಟಾಗದಂತೆ ನೋಡಿಕೊಳ್ಳಿ.
Pexels
ಮುಟ್ಟಿನ ದಿನಗಳಲ್ಲಿ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸಿ ಮತ್ತು ಸಾಕಷ್ಟು ನಿದ್ರೆ ಮಾಡುವುದನ್ನು ಮರೆಯದಿರಿ
Pexels
ಆಗಾಗ ಪ್ಯಾಡ್ ಬದಲಿಸಲು ಮರೆಯದಿರಿ. ಇಲ್ಲದಿದ್ದರೆ ಬೆವರಿನ ಕಾರಣದಿಂದ ಯೋನಿ ಸೋಂಕಿನ ಜೊತೆಗೆ ದುರ್ವಾಸನೆ ಉಂಟಾಗಬಹುದು.