2024ರಲ್ಲಿ ಜಗತ್ತಿನ 6 ಅತ್ಯುತ್ತಮ ವಿಮಾನಯಾನ ಸಂಸ್ಥೆಗಳು ಯಾವುವು?

By Praveen Chandra B
Dec 24, 2024

Hindustan Times
Kannada

ಪ್ರಯಾಣದ ಉತ್ತಮ ಅನುಭವ, ಐಷಾರಾಮಿ ಸೌಕರ್ಯ, ಅತ್ಯುತ್ತಮ ಸೇವೆ, ಜಗತ್ತಿನಾದ್ಯಂತ ಲಭ್ಯವಿರುವ ವ್ಯಾಪಕ ಮಾರ್ಗಗಳು, ಪ್ರಯಾಣಿಕರ ತೃಪ್ತಿಗಾಗಿ ಸುಧಾರಿತ ತಂತ್ರಜ್ಞಾನ ಒದಗಿಸುವ ಕಾರಣ 6 ವಿಮಾನಯಾನ ಸಂಸ್ಥೆಗಳು ಅತ್ಯುತ್ತಮ ವಿಮಾನಯಾನ ಸಂಸ್ಥೆಗಳೆಂಬ ಹಿರಿಮೆಗೆ ಪಾತ್ರವಾಗಿವೆ. 

PEXELS, TRAVEL TRIANGLE

ವಿಶ್ವದ ಕೆಲವು ಅತ್ಯುತ್ತಮ ವಿಮಾನಯಾನ ಸಂಸ್ಥೆಗಳ ವಿವರ ಇಲ್ಲಿ ನೀಡಲಾಗಿದೆ

PEXELS

ಸಿಂಗಾಪುರ ಏರ್‌ಲೈನ್ಸ್‌: ಐಷಾರಾಮಿ ಇಂಟೀರಿಯರ್‌, ಆಧುನಿಕ ಎ 350 ಮತ್ತು ಎ 787 ವಿಮಾನಗಳು ಇತ್ಯಾದಿಗಳಿಂದ ಇದು ಜಗತ್ತಿನ ಅತ್ಯುತ್ತಮ ವಿಮಾನಯಾನ ಸಂಸ್ಥೆಯಾಗಿದೆ.

PINTEREST

ಏರ್‌ ನ್ಯೂಜಿಲೆಂಡ್‌: ಆರಾಮದಾಯಕತೆ, ಮನರಂಜನೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಕ್ಕೆ ಹೆಸರುವಾಸಿಯಾದ ಏರ್‌ನ್ಯೂಜಿಲೆಂಡ್‌ ಈ ವರ್ಷ ಎರಡನೇ ಸ್ಥಾನದಲ್ಲಿದೆ.

PINTEREST

ಕತಾರ್ ಏರ್‌ವೇಸ್‌: ಹೊಸ ಕ್ಯೂಸೂಟ್ ಬಿಸಿನೆಸ್ ಕ್ಲಾಸ್ ಮತ್ತು ಸುಧಾರಿತ ಎ 350 ಹೊಂದಿರುವ ಕತಾರ್‌ ಏರ್‌ವೇಸ್‌ ಜಾಗತಿಕವಾಗಿ ಉತ್ತಮ ವಿಮಾನಯಾನ ಸಂಸ್ಥೆಯೆಂಬ ಹೆಸರು ಪಡೆದಿದೆ.

PINTEREST

ಎಮಿರೇಟ್ಸ್: ಇತ್ತೀಚಿನ ಆವಿಷ್ಕಾರಗಳನ್ನು ಹೊಂದಿಲ್ಲದೆ ಇದ್ದರೂ ವಿಶ್ವ ದರ್ಜೆಯ ಸೇವೆಗಳಿಂದಾಗಿ ಎಮಿರೆಟ್ಸ್‌ ಈಗ ಅತ್ಯುತ್ತಮ ವಿಮಾನಯಾನ ಸಂಸ್ಥೆಗಳ ಪಟ್ಟಿಯಲ್ಲಿ ಅಗ್ರ ನಾಲ್ಕನೇ ಸ್ಥಾನದಲ್ಲಿದೆ.

PINTEREST

ಕ್ಯಾಥೆ ಪೆಸಿಫಿಕ್ ಏರ್ವೇಸ್: ಹಾಂಕಾಂಗ್‌ನ ಈ ವಿಮಾನಯಾನ ಸಂಸ್ಥೆಯು ಸುರಕ್ಷತೆಗೆ ಹೆಸರುವಾಸಿಯಾಗಿದೆ. ಆಧುನಿಕ ಎ 330 ಫ್ಲೀಟ್ ಗಳು, ವಿಶಾಲವಾದ ಕ್ಯಾಬಿನ್,  ಅಸಾಧಾರಣ ಪ್ರಥಮ ದರ್ಜೆ ಆತಿಥ್ಯ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದೆ.

PINTEREST

ಜಪಾನ್‌ ಏರ್‌ಲೈನ್ಸ್‌: ವಿಮಾನದೊಳಗಿನ ಸೇವೆಗಳು, ಪ್ರಾದೇಶಿಕ ಆರ್ಥಿಕತೆಗೆ ಬೆಂಬಲ ನೀಡುವುದು ಸೇರಿದಂತೆ ಹಲವು ಕಾರಣಗಳಿಂದ ಜಪಾನ್‌ ಏರ್‌ಲೈನ್ಸ್‌ ಅತ್ಯುತ್ತಮ ವಿಮಾನಯಾನ ಸಂಸ್ಥೆಯಾಗಿ ಪರಿಣಮಿಸಿದೆ.

PINTEREST

ಶ್ರೀಲಂಕಾ ವಿರುದ್ಧ ಭಾರತದ 317 ರನ್‌ ಗೆಲುವಿಗೆ 2 ವರ್ಷ

AFP