ಹಿಂದೂ ಧರ್ಮದ ಪ್ರಕಾರ ಒಂದೊಂದು ದಿನವೂ ಒಂದೊಂದು ದೇವರಿಗೆ ಮೀಸಲಾಗಿದೆ. ಶನಿವಾರ ಎಲ್ಲರೂ ಶನಿದೇವರನ್ನು ಆರಾಧಿಸುತ್ತೇವೆ
ಶನಿಯನ್ನು ಕರ್ಮಕಾರಕ ಎಂದು ಕರೆಯುತ್ತಾರೆ. ಜನರು ಮಾಡುವ ಪಾಪ, ಕರ್ಮಗಳಿಗೆ ಅನುಸಾರ ಶನಿಯು ಫಲಗಳನ್ನು ನೀಡುತ್ತಾನೆ
ಆದರೆ ಶನಿಯನ್ನು ಪೂಜಿಸುವಾಗ ಕೆಲವೊಂದು ನೀತಿ ನಿಯಮಗಳನ್ನು ಪಾಲಿಸಬೇಕು
ಶನಿದೇವರ ಪೂಜೆಗೆ ಎಂದಿಗೂ ತಾಮ್ರದ ವಸ್ತುಗಳನ್ನು ಬಳಸಬಾರದು, ಏಕೆಂದರೆ ತಾಮ್ರದ ಪಾತ್ರೆಗಳು ಸೂರ್ಯನಿಗೆ ಸಂಬಂಧಿಸಿದ್ದಾಗಿದೆ
ಶನಿಯು ಸೂರ್ಯನ ಮಗನಾಗಿದ್ದರೂ ಇಬ್ಬರೂ ಅಂತಿಮ ಶತ್ರುಗಳು. ಒಂದು ವೇಳೆ ತಾಮ್ರದ ಪಾತ್ರೆಗಳನ್ನು ಬಳಸಿದರೆ ಇಬ್ಬರ ಸ್ಥಾನ ದುರ್ಬಲವಾಗುತ್ತದೆ
ಮಂಗಳ ಹಾಗೂ ಶನಿಯು ಪರಸ್ಪರ ಶತ್ರು ಗ್ರಹಗಳು. ಕೆಂಪು ಬಣ್ಣವು ಮಂಗಳನನ್ನು ಸಂಕೇತಿಸುತ್ತದೆ, ಆದ್ದರಿಂದ ಶನಿಯ ಪೂಜೆಯಲ್ಲಿ ಕೆಂಪು ಬಣ್ಣದ ಹೂ, ಬಟ್ಟೆಗಳು ಇತರ ವಸ್ತುಗಳನ್ನು ಬಳಸಬಾರದು
ಚರ್ಮದಿಂದ ತಯಾರಿಸಿದ ಯಾವುದೇ ವಸ್ತುಗಳನ್ನು ಕೂಡಾ ಶನೈಶ್ಚರನ ಪೂಜೆಯಲ್ಲಿ ಬಳಸಬಾರದು
ಶನಿದೇವರ ಪೂಜೆಗೆ ಒಡೆದ ದೀಪ, ಹಾಳಾದ ಹೂವು ಅಥವಾ ಶುದ್ಧವಲ್ಲದ ಯಾವುದೇ ವಸ್ತುಗಳ ಬಳಕೆ ಬೇಡ
ಶನೈಶ್ಚರನನ್ನು ಪೂಜಿಸುವಾಗ ನಿಮ್ಮ ಮನಸ್ಸು ಕೂಡಾ ಶುದ್ಧವಾಗಿರಬೇಕು, ಯಾವುದೇ ವ್ಯಕ್ತಿಯ ಬಗ್ಗೆ ದ್ವೇಷ, ಅಸೂಯೆ ಅಥವಾ ಇನ್ನಿತರ ಭಾವನೆಗಳು ಇರಬಾರದು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.