ಡಬ್ಲ್ಯುಪಿಎಲ್: 500 ಮಹಿಳಾ ಕ್ರಿಕೆಟ್ ಫ್ಯಾನ್ಸ್​ಗೆ ಬಂಪರ್ ಲಾಟರಿ, ಏನದು?

By Prasanna Kumar P N
Feb 23, 2024

Hindustan Times
Kannada

ಇವತ್ತಿನಿಂದ ವುಮೆನ್ಸ್ ಪ್ರೀಮಿಯರ್ ಲೀಗ್​ ಆರಂಭವಾಗುತ್ತಿದೆ.

ಉದ್ಘಾಟನಾ ಪಂದ್ಯವನ್ನು ಕಣ್ತುಂಬಿಕೊಳ್ಳಲು ಬರುವ ಮಹಿಳೆಯರಿಗೆ ಬಿಸಿಸಿಐ ಬಂಪರ್ ಉಡುಗೊರೆಯೊಂದನ್ನು ಘೋಷಿಸಿದೆ.

ಮೊದಲ ಪಂದ್ಯ ವೀಕ್ಷಿಸಲು ಮೊದಲು ಬರುವ 500 ಮಹಿಳಾ ಕ್ರಿಕೆಟ್ ಫ್ಯಾನ್ಸ್​ಗೆ ಟಿಕೆಟ್ ಉಚಿತ ಇರಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ.

ಈ ಬಗ್ಗೆ ಡಬ್ಲ್ಯುಪಿಎಲ್ ಅಧಿಕೃತ ಸಾಮಾಜಿಕ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್​ ಖ್ಯಾತ ನಟರಾದ ಶಾರೂಖ್ ಖಾನ್, ವರುಣ್ ಧವನ್, ಕಾರ್ತಿಕ್ ಆರ್ಯನ್, ಸಿದ್ಧಾರ್ಥ್ ಮಲ್ಹೋತ್ರಾ ಪ್ರದರ್ಶನ ನೀಡಲಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಫೆಬ್ರವರಿ 23ರಿಂದ ಮಾರ್ಚ್ 4ರ ತನಕ ಡಬ್ಲ್ಯುಪಿಎಲ್ ನಡೆಯಲಿದೆ.

ಉಳಿದ ಲೀಗ್​ ಪಂದ್ಯಗಳು ಮತ್ತು ಎಲಿಮಿನೇಟರ್ ಹಾಗೂ ಫೈನಲ್ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿವೆ.

ಕಷ್ಟಪಟ್ಟು ಅಲ್ಲ, ಇಷ್ಟಪಟ್ಟು ಓದಿ; ಪರೀಕ್ಷಾ ಸಿದ್ಧತೆಗೆ 6 ಸಲಹೆಗಳು

Pinterest