ಬೆಂಗಳೂರು ಅಭಿಮಾನಿಗಳಿಗೆ ಆರ್‌ಸಿಬಿ ಆಟಗಾರ್ತಿಯರು ಧನ್ಯವಾದ ಹೇಳಿದ್ದಾರೆ.

By Jayaraj
Mar 05, 2024

Hindustan Times
Kannada

ಚಿನ್ನಸ್ವಾಮಿ ಮೈದಾನದಲ್ಲಿ ಆಡಿದ ಕೊನೆಯ ಪಂದ್ಯದ ಬಳಿಕ, ನಿಷ್ಠಾವಂತ ಫ್ಯಾನ್ಸ್‌ಗೆ ಆರ್‌ಸಿಬಿ ವನಿತೆಯರು ಕೃತಜ್ಞತೆ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಆರ್‌ಸಿಬಿ ವನಿತೆಯರ ತಂಡವು 5 ಪಂದ್ಯಗಳಲ್ಲಿ ಆಡಿತ್ತು. ಇದರಲ್ಲಿ 3 ಪಂದ್ಯಗಳಲ್ಲಿ ಗೆದ್ದು ಬೀಗಿದೆ.

ಈ ಎಲ್ಲಾ ಪಂದ್ಯಗಳಲ್ಲೂ ಸ್ಟೇಡಿಯಂ ಪೂರ್ತಿ ಅಭಿಮಾನಿಗಳು ತುಂಬಿದ್ದರು.

ಎರಡು ಪಂದ್ಯಗಳಲ್ಲಿ ಸೋತರೂ, ಅಭಿಮಾನಿಗಳ ಬೆಂಬಲ ಮಾತ್ರ ಕುಂದಿಲ್ಲ. ಆರ್‌ಸಿಬಿಯ ಫ್ಯಾನ್ಸ್‌ ಬೆಂಬಲಕ್ಕೆ ಆಟಗಾರ್ತಿಯರು ಮನಸೋತಿದ್ದಾರೆ.

ಹೀಗಾಗಿ ತವರು ಮೈದಾನದಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಗೆದ್ದ ಬಳಿಕ, ನಿರಂತರ ಬೆಂಬಲ ನೀಡಿದ ಅಭಿಮಾನಿಗಳಿಗೆ ಆಟಗಾರ್ತಿಯರು ಧನ್ಯವಾದ ಸಲ್ಲಿಸಿದ್ದಾರೆ.

ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದ ವೇಳೆ, ಆರ್‌ಸಿಬಿ ನಾಯಕಿ ಸ್ಮೃತಿ ಮಂಧನಾಗೆ ಅಭಿಮಾನಿಹ ವಿಶೇಷ ಬಿನ್ನಹ.

ಮಂಧಾನ ಸ್ವರ್ಗದಲ್ಲಿ ಆಡಿದರೂ, 'ನಾನು ನಿಮ್ಮ ಪಂದ್ಯ ವೀಕ್ಷಿಸಲು ಸಾಯುತ್ತೇನೆ' ಎಂದು ಡೈಹಾರ್ಡ್‌ ಫ್ಯಾನ್‌ ಹೇಳಿಕೊಂಡಿದ್ದಾರೆ.

ಬೆಂಗಳೂರು ಹಂತದ ಪಂದ್ಯಗಳ ಬಳಿಕ ಡಬ್ಲ್ಯೂಪಿಎಲ್‌ ದೆಹಲಿಗೆ ಶಿಫ್ಟ್‌ ಆಗಿವೆ.

ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್‌ ಕಠಾರಿ