Yamaha FZ S Fi Hybrid: ಹೈಬ್ರಿಡ್ ಪವರ್ ಹೊಂದಿರುವ ಭಾರತದ ಮೊದಲ 150 ಸಿಸಿ ಬೈಕ್
By Kiran Kumar I G
Mar 15, 2025
Hindustan Times
Kannada
ಯಮಹಾ ಕಂಪನಿಯು ಭಾರತದ ಮೊದಲ 150 ಸಿಸಿ ಹೈಬ್ರಿಡ್ ಚಾಲಿತ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.
ಹೊಸ ಯಮಹಾ ಎಫ್ ಝಡ್-ಎಸ್ ಎಫ್ ಐ ಹೈಬ್ರಿಡ್ ಬೈಕಿನಲ್ಲಿ ಸ್ಮಾರ್ಟ್ ಮೋಟಾರ್ ಜನರೇಟರ್ ಅಳವಡಿಸಲಾಗಿದೆ.
ಸ್ಟಾರ್ಟರ್ ಮೋಟಾರ್ ಜನರೇಟರ್ 149 ಸಿಸಿ ಎಂಜಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅಗತ್ಯವಿದ್ದಾಗ ಟಾರ್ಕ್‌ನಲ್ಲಿ ಸ್ವಲ್ಪ ಉತ್ತೇಜನ ನೀಡುತ್ತದೆ
ಈ ಬೈಕ್ ಸ್ಟಾಪ್-ಸ್ಟಾರ್ಟ್ ಟೆಕ್ ಅನ್ನು ಸಹ ಪಡೆಯುತ್ತದೆ, ಇದು ಕಾರ್ಯಕ್ಷಮತೆ ಮತ್ತು ಒಟ್ಟಾರೆ ಇಂಧನ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಬೈಕ್ ನಿಲ್ಲಿಸಿದಾಗ ಇಂಜಿನ್ ಅಟೋ ಆಫ್ ಆಯ್ಕೆ ಇರುತ್ತದೆ. ಮತ್ತೆ ಶುರು ಮಾಡಲು ಸವಾರನು ಕ್ಲಚ್ ಅನ್ನು ಎಳೆಯಬೇಕು ಮತ್ತು ಎಕ್ಸಿಲರೇಟರ್ ಕೊಡಬೇಕು.
ಹೊಸ ತಂತ್ರಜ್ಞಾನವು ಯಮಹಾ ಎಫ್ ಝಡ್-ಎಸ್ ಎಫ್ ಐ ಹೈಬ್ರಿಡ್ ನಲ್ಲಿ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯ ಸುಧಾರಣೆಯನ್ನು ಹೆಚ್ಚಿಸುತ್ತದೆ.
ಈ ಬೈಕ್ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಗೂಗಲ್ ಮ್ಯಾಪ್ಸ್ ಮೂಲಕ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ನೊಂದಿಗೆ ಹೊಸ 4.2-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ಸಹ ಪಡೆಯುತ್ತದೆ
ಹೊಸ ಎಫ್ ಝಡ್-ಎಸ್ ಎಫ್ ಐ ಹೈಬ್ರಿಡ್ ಹೊಸ ಎಲ್ಇಡಿ ಟರ್ನ್ ಇಂಡಿಕೇಟರ್ ಎರಡೂ ಬದಿಯಲ್ಲಿ ಹೊಂದಿದೆ.
ಹೊಸ ಯಮಹಾ ಎಫ್ ಝಡ್-ಎಸ್ ಎಫ್ ಐ ಹೈಬ್ರಿಡ್ ಬೈಕಿನ ಬೆಲೆಯು ರೂ.1.45 ಲಕ್ಷಗಳಾಗಿದ್ದು, ಟಾಪ್ ಎಂಡ್ ಡೀಲಕ್ಸ್ ಆವೃತ್ತಿಗಿಂತ ರೂ.14,000 ಹೆಚ್ಚು ದುಬಾರಿಯಾಗಿದೆ.
ಯಮಹಾ ಎಫ್ ಝಡ್-ಎಸ್ ಎಫ್ ಐ ಹೈಬ್ರಿಡ್ ಬೈಕಿನ ಬೆಲೆಯು ರೂ.1.45 ಲಕ್ಷ, ಇದು ಎಕ್ಸ್ ಶೋ ರೂಮ್ ದರವಾಗಿದೆ.
ಯಮಹಾ ಎಫ್ ಝಡ್-ಎಸ್ ಎಫ್ ಐ ಹೈಬ್ರಿಡ್ ಆಕರ್ಷಕ ಗ್ರಾಫಿಕ್ಸ್ ವಿನ್ಯಾಸ ಹೊಂದಿದೆ.
Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ