2024ರಲ್ಲಿ ಸದ್ದು ಮಾಡಿದ ಸೆಲೆಬ್ರಿಟಿಗಳ ಮದುವೆ; ಅಂಬಾನಿ ಮಗನ ಮದುವೆ ಮಾತ್ರವಲ್ಲ!

By Reshma
Dec 16, 2024

Hindustan Times
Kannada

2024ರಲ್ಲಿ ಭಾರತದಲ್ಲಿ ಕೆಲವು ಸೆಲೆಬ್ರಿಟಿಗಳ ಮದುವೆ ಭಾರಿ ಸದ್ದು ಮಾಡಿತ್ತು. ಐಷಾರಾಮಿಯಾಗಿ ಸಂಪ್ರದಾಯ ಬದ್ಧವಾಗಿ ಹಸೆಮಣೆ ಏರಿದ ಜೋಡಿಗಳಿವು 

ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಜೆಂಟ್ ಮದುವೆ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತ್ತು 

ಇವರ ಮದುವೆ ಒಂದು ರೀತಿಯ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿತ್ತು. ಇವರ ಮದುವೆಗೆ ಪ್ರಪಂಚದಾದ್ಯಂತ ಪ್ರಸಿದ್ಧ ವ್ಯಕ್ತಿಗಳು ಬಂದಿದ್ದರು 

ತಿಂಗಳಿಗೂ ಹೆಚ್ಚು ಕಾಲ ಮದುವೆ ಕಾರ್ಯಕ್ರಮಗಳು ನಡೆದಿದ್ದವು. ಗುಜರಾತ್‌, ಮುಂಬೈ, ಯುರೋಪ್‌ನಲ್ಲಿ ಮದುವೆ ಕಾರ್ಯಕ್ರಮಗಳು ನಡೆದಿದ್ದವು 

ವಿಜಯ್ ಮಲ್ಯ ಅವರ ಸಿದ್ಧಾರ್ಥ್ ಮಲ್ಯ ಲಂಡನ್‌ನಲ್ಲಿ ಗೆಳತಿ ಜಾಸ್ಮಿನ್ ಅವರನ್ನು ಮದುವೆಯಾದವರು 

ಈ ದಂಪತಿಗಳು ತಮ್ಮ ಮದುವೆ ಸಮಾರಂಭದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು 

ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಜೂನ್ 2024ರಲ್ಲಿ ಮುಂಬೈನಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸುಂದರ ಸಮಾರಂಭದೊಂದಿಗೆ ಮದುವೆಯಾಗಿದ್ದರು 

ಸುಂದರವಾದ ಅಲಂಕಾರ, ಸುಮಧುರ ಕ್ಷಣಗಳ ನಡುವೆ ಈ ಜೋಡಿ ಹಸಮಣೆ ಏರಿದ್ದರು 

ಅಮೀರ್ ಖಾನ್ ಪುತ್ರಿ ಇರಾ ಖಾನ್ ನೂಪುರ್ ಶಿಖರೆ ಅವರನ್ನು ಉದಯಪುರದಲ್ಲಿ ಮದುವೆಯಾಗುತ್ತಾರೆ

ಇರಾ ಹಾಗೂ ನೂಪುರ್ ಬಹಳ ದಿನಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. 2023ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು 

ಚಳಿಗಾಲದಲ್ಲಿ ಮೂಳೆ ನೋವಿನ ಸಮಸ್ಯೆಗೆ ಪರಿಹಾರ ನೀಡುವ ಆಹಾರಗಳಿವು 

Canva