ಯುಗಾದಿ ಹಬ್ಬದ ವಿಶೇಷ ತಿನಿಸು ಪಚಡಿ ತಯಾರಿಸುವುದು ಹೀಗೆ

By Reshma
Apr 05, 2024

Hindustan Times
Kannada

ಯುಗಾದಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ಹೊಸವರ್ಷ ಎಂದೂ ಕರೆಯುತ್ತಾರೆ. ಯುಗಾದಿ ಹಬ್ಬದಂದು ಪಚಡಿ ತಯಾರಿಸುವುದು ವಿಶೇಷ. 

ಪಚಡಿ ಸಿಹಿ, ಹುಳಿ, ಉಪ್ಪು, ಮಸಾಲೆ, ಒಗರು ಹಾಗೂ ಕಹಿ ರುಚಿಯನ್ನು ಹೊಂದಿರುವ ವಿಶೇಷ ಖಾದ್ಯ. ಇದನ್ನು ಆಂಧ್ರಪ್ರದೇಶ ಭಾಗದಲ್ಲಿ ಹೆಚ್ಚು ತಯಾರಿಸಿದರೂ ಕರ್ನಾಟಕದಲ್ಲೂ ಕೆಲವು ಭಾಗಗಳಲ್ಲಿ ಮಾಡುತ್ತಾರೆ. 

ಪಚಡಿಯನ್ನು ಬೇವಿನ ಹೂಗಳು, ಹುಣಸೆಹಣ್ಣು, ಮಾವಿನಕಾಯಿ, ಕಾಳುಮೆಣಸು, ಬೆಲ್ಲ ಮುಂತಾದ ಸಾಮಗ್ರಿಗಳಿಂದ ತಯಾರಿಸುತ್ತಾರೆ. 

ನೈವೇದ್ಯಕ್ಕೆ ಪಚಡಿ ತಯಾರಿಸಲು ನೀರು - ಒಂದೂವರೆ ಕಪ್‌, ಮಾವಿನಕಾಯಿ- 2 ರಿಂದ 3 ಚಮಚ (ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಬೇಕು), ಬೇವಿನ ಹೂ- ಸ್ವಲ್ಪ, ಉಪ್ಪು - ರುಚಿಗೆ, ಬೆಲ್ಲ - 3ರಿಂದ 4 ಚಮಚ, ಕಾಳಮೆಣಸಿನ ಪುಡಿ - ಚಿಟಿಕೆ, ಹುಣಸೆರಸ - ಒಂದೂವರೆ ಚಮಚ ಇವಿಷ್ಟೂ ಬೇಕು.

ತಯಾರಿಸುವ ವಿಧಾನ: ಹುಣಸೆಹಣ್ಣು ನೆನೆಸಿ, ರಸ ತಯಾರಿಸಿಟ್ಟುಕೊಳ್ಳಿ. ತಾಜಾ ಬೇವಿನ ಹೂಗಳನ್ನು ಬಿಡಿಸಿ ಇಟ್ಟುಕೊಳ್ಳಿ. ಬೇವಿನ ಹೂ ದೊಡ್ಡದಿದ್ದರೆ ಚಿಕ್ಕದಾಗಿ ಹೆಚ್ಚಿಕೊಳ್ಳಬಹುದು. ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಬೆಲ್ಲದ ಪುಡಿ ಸೇರಿಸಿ, ಬೆಲ್ಲ ಕರಗುವವರೆಗೂ ಕೈಯಾಡಿಸಿ. ಈ ನೀರನ್ನು ಒಂದು ಪಾತ್ರೆಗೆ ಸೋಸಿ, ನಂತರ ಅದೇ ಪಾತ್ರೆಗೆ ಹುಣಸೆರಸವನ್ನು ಸೋಸಿ ಹಾಕಿ. 

ಈ ನೀರನ್ನು ಒಂದು ಪಾತ್ರೆಗೆ ಸೋಸಿ, ನಂತರ ಅದೇ ಪಾತ್ರೆಗೆ ಹುಣಸೆರಸವನ್ನು ಸೋಸಿ ಹಾಕಿ. ನಂತರ ಉಳಿದ ಸಾಮಗ್ರಿಗಳನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ದೇವರಿಗೆ ನೈವೇದ್ಯ ಮಾಡಿ, ನಂತರ ಮನೆಯವರೆಲ್ಲರಿಗೂ ಹಂಚಿ.

ಯುಗಾದಿ ಪಚಡಿ ಆರೋಗ್ಯಕ್ಕೂ ಉತ್ತಮ. ಇದಕ್ಕೆ ಬಳಸುವ ಎಲ್ಲಾ ಪದಾರ್ಥಗಳು ವಿಶೇಷ ಆರೋಗ್ಯ ಪ್ರಯೋಜನವನ್ನೂ ಹೊಂದಿವೆ. ನೀವು ಈ ಬಾರಿ ಯುಗಾದಿಗೆ ಈ ವಿಶೇಷ ಪಚಡಿಯನ್ನು ಮಾಡಿ ಸವಿಯಿರಿ.

ಈ ತಾರೀಖಿನಂದು ಹುಟ್ಟಿದ ಹುಡುಗಿಯರು ಚಿಕ್ಕ ವಯಸ್ಸಲ್ಲೇ ಶ್ರೀಮಂತಿಕೆ ಗಳಿಸುತ್ತಾರೆ