ಯುಗಾದಿ ಹಬ್ಬಕ್ಕೆ ದುಬಾರಿ ಸೀರೆ ಉಡುವ ಆಸೆಯಿದ್ದರೆ ಈ ಟಿಪ್ಸ್‌ ಮರಿಬೇಡಿ

By Reshma
Apr 05, 2024

Hindustan Times
Kannada

ಭಾರತೀಯ ಹೆಣ್ಣುಮಕ್ಕಳು ಶುಭ ಸಮಾರಂಭಗಳಲ್ಲಿ ದುಬಾರಿ ಸೀರೆ ಉಡಲು ಇಷ್ಟಪಡುತ್ತಾರೆ. ಯಾವುದೇ ಬಣ್ಣ, ವಿಧದ ಸೀರೆಯಾದ್ರೂ ಸರಿಯಾಗಿ ಉಟ್ಟರೆ ಮಾತ್ರ ಅದರ ಅಂದ ಹೆಚ್ಚುತ್ತದೆ. 

ಈ ವರ್ಷದ ಯುಗಾದಿ ಹಬ್ಬಕ್ಕೆ ನೀವು ದುಬಾರಿ ಸೀರೆ ಉಡುವ ಪ್ಲಾನ್‌ ಮಾಡಿದ್ದರೆ, ಈ ಟಿಪ್ಸ್‌ಗಳನ್ನು ಪಾಲಿಸಲು ಮರೆಯಬೇಡಿ. 

ಸೆಲೆಬ್ರಿಟಿಗಳಿಂದ ಜನರ ಸಾಮಾನ್ಯರವರೆಗೆ ಎಲ್ಲರೂ ದುಬಾರಿ ಸೀರೆ ಉಡಲು ಇಷ್ಟಪಡುತ್ತಾರೆ. ಕಾರಣ ಇದರ ರಿಚ್‌ ಲುಕ್‌. ಈ ಸೀರೆಗಳ ಪ್ಯಾಟರ್ನ್‌, ಡಿಸೈನ್‌, ಎಂಬ್ರಾಯಿಡರಿ ವರ್ಕ್‌ ಎಲ್ಲವೂ ಸಖತ್‌ ಆಗಿರುತ್ತೆ. 

ದುಬಾರಿ ಸೀರೆ ಉಡುವುದು ಸ್ವಲ್ಪ ಕಷ್ಟವಾದ್ರೂ ಇದನ್ನು ಉಟ್ಟಾಗ ಮಸ್ತ್‌ ಲುಕ್‌ ಸಿಗುವುದು ಸುಳ್ಳಲ್ಲ. ಅದಕ್ಕಾಗಿ ಸರಿಯಾದ ಶೈಲಿಯಲ್ಲಿ ಉಡಬೇಕು. 

ಇಂತಹ ಸೀರೆಗಳನ್ನು ಉಟ್ಟಾಗ ಅಥವಾ ಉಟ್ಟಾದ ನಂತರ ಮಹಿಳೆಯರು ಕೆಲವು ತಪ್ಪು ಕ್ರಮಗಳನ್ನು ಅನುಸರಿಸುತ್ತಾರೆ. ಇದರಿಂದಾಗಿ ಸೀರೆಯ ಜೊತೆಗೆ ಅವರ ಅಂದವೂ ಕೆಡುತ್ತದೆ. 

ಹಂತ 1: ದುಬಾರಿ ಸೀರೆ ಉಡುವ ಮೊದಲು ಪೆಟಿಕೋಟ್‌ ಅನ್ನು ಸರಿಯಾಗಿ ಕಟ್ಟಿಕೊಳ್ಳಬೇಕು. ಈ ಸೀರೆ ಭಾರ ಇರುವ ಕಾರಣಕ್ಕೆ ಪೆಟಿಕೋಟ್‌ ಸಡಿಲವಾಗಿದ್ದರೆ ಸೀರೆ ನೆರಿಗೆ ಸರಿಯಾಗಿ ಕೂರುವುದಿಲ್ಲ. 

ದುಬಾರಿ ಸೀರೆ ಉಡುವಾಗ ಮೊದಲ ಕೆಳಭಾಗ ಅಂದರೆ ನೆರಿಗೆ ತೆಗೆಯುವುದು ಬಹಳ ಮುಖ್ಯ. ನಂತರ ಮೇಲ್ಭಾಗದ ಕಡೆ ಗಮನ ಕೊಡಿ. 

ನೆರಿಗೆ ಪರ್ಫೆಕ್ಟ್‌ ಎನ್ನಿಸಿದ ಮೇಲೆ ಸೆರಗಿನ ಕಡೆ ಗಮನ ಕೊಡಿ. ಸೆರಗು ಅತಿಯಾಗಿ ಉದ್ದ ಇದ್ದರೆ ಚೆನ್ನಾಗಿ ಕಾಣುವುದಿಲ್ಲ. ಹಾಗಂತ ಗಿಡ್ಡದ ಸೆರಗು ಚೆಂದವಲ್ಲ.

ಪಲ್ಲುವನ್ನು ಸೊಂಟಕ್ಕೆ ಸಿಕ್ಕಿಸಬೇಡಿ. ಈ ರೀತಿ ಮಾಡಿದರೆ ಬನಾರಸಿ ಸೀರೆಯ ಅಂದಗೆಡುವುದರಲ್ಲಿ ಅನುಮಾನವಿಲ್ಲ. 

ಸೀರೆ ನೆರಿಗೆಗಳನ್ನು ನೀಟಾಗಿ ಜೋಡಿಸಿಕೊಂಡ ನಂತರವಷ್ಟೇ ಹೊಟ್ಟೆಯ ಬಳಿ ಸಿಕ್ಕಿಸಿ. ಅದಕ್ಕೂ ಮೊದಲು ಎಲ್ಲಾ ನೆರಿಗೆಗೂ ಸೇರಿಸಿ ಪಿನ್‌ ಮಾಡುವುದನ್ನು ಮರೆಯಬೇಡಿ. 

ದುಬಾರಿ ಸೀರೆ ಭಾರವಾಗಿರುವ ಕಾರಣ ಸೆರಗನ್ನು ಹರಡಿ ಬಿಡುವುದಕ್ಕಿಂತ ನೀಟಾಗಿ ಮಡಿಸಿ ಪಿನ್‌ ಮಾಡುವುದು ಉತ್ತಮ. ಇದರಿಂದ ಅಂದವೂ ಹೆಚ್ಚುತ್ತದೆ. 

ಪ್ಲೇಆಫ್​ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ