ರಾಜಕೀಯಕ್ಕೆ ಧುಮುಕಿದ ಯೂಸಫ್ ಪಠಾಣ್; ಟಿಎಂಸಿ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಕಣಕ್ಕೆ

All Photos from Yusuf Pathan Instagram

By Prasanna Kumar P N
Mar 10, 2024

Hindustan Times
Kannada

ಭಾರತ ತಂಡದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್​ ಆರಂಭಿಸಲು ಸಿದ್ಧರಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಅಧಿಕೃತವಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಳತ್ವದ ಟಿಎಂಸಿ 42 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಯೂಸುಫ್ ಪಠಾಣ್ ಹೆಸರಿರುವುದು ವಿಶೇಷ. ಬಂಗಾಳದ ಬರ್ಹಾಂಪುರ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

2019ರಲ್ಲಿ ಕಾಂಗ್ರೆಸ್​ನಿಂದ ಅಧೀರ್ ರಂಜನ್ ಚೌಧರಿ ಸಂಸದರಾಗಿ ನೇಮಕಗೊಂಡಿದ್ದರು. ಈಗವರ ವಿರುದ್ಧ ಯೂಸುಫ್ ಟಿಎಂಸಿ ಕಣಕ್ಕಿಳಿಯಲಿದ್ದಾರೆ.

ಗುಜರಾತ್ ಮೂಲದ ಯೂಸುಫ್ ಈ ಹಿಂದೆ ಐಪಿಎಲ್‌ನಲ್ಲಿ ಕೆಕೆಆರ್​​​ ಪರ ಆಡಿದ್ದಾರೆ. ಐಪಿಎಲ್​ನಲ್ಲಿ 174 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 1415 ರನ್ ಮತ್ತು 42 ವಿಕೆಟ್ ಕಬಳಿಸಿದ್ದಾರೆ. 

ಈಗಾಗಲೇ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಯೂಸಫ್ ಪಠಾಣ್ ಈಗ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಗೋವಿಂದ ಕಾರಜೋಳ 73 ವರ್ಷ  ಬಿಜೆಪಿ ಚಿತ್ರದುರ್ಗ